ಥಾಯ್ಲೆಂಡ್ ಓಪನ್: ಒಂದು ವಾರದ ಅಂತರದಲ್ಲಿ ಎರಡು ಪ್ರಶಸ್ತಿ ಗೆದ್ದ ಕರೊಲಿನಾ ಮರಿನ್ - Carolina Marin, Viktor Axelson
🎬 Watch Now: Feature Video
ಬ್ಯಾಂಕಾಕ್: ಸ್ಪೇನಿನ ಸ್ಟಾರ್ ಶಟ್ಲರ್ ಕರೊಲಿನಾ ಮರಿನ್ ಒಂದು ವಾರದ ಅಂತರದಲ್ಲಿ ಬ್ಯಾಂಕಾಕ್ನಲ್ಲಿ ನಡೆದ 2 ಥಾಯ್ಲೆಂಡ್ ಓಪನ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಕಳೆದ ವಾರ ಯುನೆಕ್ಸ್ ಥಾಯ್ಲೆಂಡ್ ಓಪನ್ ಗೆದ್ದಿದ್ದ ಸ್ಪ್ಯಾನಿಷ್ ಸ್ಟಾರ್ ಇಂದು ನಡೆದ ಟೊಯೊಟ ಥಾಯ್ಲೆಂಡ್ ಓಪನ್ನಲ್ಲಿ ತೈವಾನ್(ಚೀನಾ ತೈಪೆಯ) ತಾಯ್ ಜು ಯಿಂಗ್ ವಿರುದ್ಧ 21-19, 21-17ರಲ್ಲಿ ಗೆಲುವು ಸಾಧಿಸಿದರು. ಪುರುಷರ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ನ ಅಕ್ಸೆಲ್ಸನ್ ತಮ್ಮದೇ ದೇಶದ ಹ್ಯಾನ್ಸ್ ಕ್ರಿಸ್ಟಿಯನ್ ಸಾಲ್ಬರ್ಗ್ ವಿಟಿಂಗಸ್ ಎದುರು 21-11, 21-7ರಲ್ಲಿ ಜಯ ಗಳಿಸಿದರು.