ನಮ್ಮನ್ನ ಸ್ಟಾರ್ ಮಾಡಿರೋದೇ ನೀವು: ಪುನೀತ್ ಈ ಮಾತನ್ನ ಹೇಳಿದ್ದು ಯಾರಿಗೆ ಗೊತ್ತಾ? - ಯುವ ಸಂಭ್ರಮ ಯಾತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11111633-thumbnail-3x2-chaii.jpg)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆ ಆಗೋದಿಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಯುವರತ್ನ ಚಿತ್ರತಂಡ, ರಾಜ್ಯಾದ್ಯಂತ ಯುವ ಸಂಭ್ರಮ ಯಾತ್ರೆ ಶುರು ಮಾಡಿದೆ. ಭಾನುವಾರ ಕಲಬುರಗಿ, ಬೆಳಗಾವಿ, ಹಾಗು ಹುಬ್ಬಳ್ಳಿಗೆ ಯುವರತ್ನ ಪುನೀತ್ ರಾಜ್ಕುಮಾರ್, ನಟರಾದ ಡಾಲಿ ಧನಂಜಯ್, ರವಿಶಂಕರ್ ಗೌಡ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೂಡಿ ಯುವ ಸಂಭ್ರಮ ಯಾತ್ರೆ ಮಾಡುತ್ತಿದೆ. ನಿನ್ನೆ ಹುಬ್ಬಳ್ಳಿಯ ಅರ್ಬನ್ ಒಯಾಸಿಸ್ ಮಾಲ್ ಹತ್ತಿರ ಸಾವಿರಾರು ಅಭಿಮಾನಿಗಳು ಪವರ್ ಸ್ಟಾರ್ಗೆ ಮೂರು ಕ್ರೇನ್ ಮೂಲಕ ದೊಡ್ಡ ಹೂವು, ಸೇಬಿನ ಹಾರ ಹಾಕುವ ಅಭಿಮಾನ ಮೆರೆದಿದ್ದರು. ಈ ವೇಳೆ ಮಾತನಾಡಿದ ಪುನೀತ್, ನೀವೇ ನಮ್ಮ ನಿಜವಾದ ಸ್ಟಾರ್ಗಳು ಎಂದು ಅಭಿಮಾನಿಗಳನ್ನು ಹುರಿದುಂಬಿಸಿದರು. ಈ ಕ್ಷಣವನ್ನ ಹೊಂಬಾಳೆ ಫಿಲ್ಮ್ಸ್ ತಂಡ ಚಿತ್ರೀಕರಿಸಿದೆ.