ಅಭಿಮಾನಿಯ ಸ್ಕೂಟಿ ಏರಿದ ಉಪ್ಪಿ - fan of upendra
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11169836-thumbnail-3x2-aaaaaaaaaa.jpg)
ಬೆಂಗಳೂರು: ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿ ತನ್ನ ಹೊಸ ಸ್ಕೂಟಿಯನ್ನು ಉಪೇಂದ್ರರೊಂದಿಗೆ ಮೊದಲು ಓಡಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಸುಮಾರು 20 ವರ್ಷಗಳಿಂದ ಉಪೇಂದ್ರ ಅವರ ಅಭಿಮಾನಿಯಾಗಿರುವ ಮುರುಳಿ ಎಂಬುವರು ತನ್ನ ಹೊಸ ಗಾಡಿಯನ್ನು ಮೊದಲು ನಟ ಉಪೇಂದ್ರ ಅವರೇ ಓಡಿಸಬೇಕೆಂದು ಸ್ಕೂಟಿಯನ್ನು ಗೂಡ್ಸ್ ಗಾಡಿಯಲ್ಲಿ ಹಾಕಿಕೊಂಡು ಉಪೇಂದ್ರ ಮನೆ ಬಳಿ ಬಂದಿದ್ದಾರೆ. ಬಳಿಕ ಉಪ್ಪಿ ಕೈಯಲ್ಲಿ ಹೊಸ ಗಾಡಿಯನ್ನ ಓಡಿಸಿದ್ದಾರೆ. ಈ ಹಿಂದೆ ಮುರುಳಿ ತನ್ನ ಎರಡು ಹೆಣ್ಣು ಮಕ್ಕಳಿಗೆ ಉಪೇಂದ್ರ ಅವರಿಂದಲೇ ನಾಮಕರಣ ಮಾಡಿಸಿದ್ದರು. ಇದೀಗ ಅವರ ಹೊಸ ಗಾಡಿಯನ್ನು ಓಡಿಸುವ ಮೂಲಕ ಉಪ್ಪಿ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.