ಎಲ್ಲರಿಗೆ ಹೆಗಲು ಕೊಟ್ಟ ಜೀವ ಇಂದು ತಣ್ಣಗೆ ಮಲಗಿದೆ: ನಟಿ ಜಯಮಾಲಾ - ಶಿವರಾಂ ಬಗ್ಗೆ ಮಾಗ್ಗೆ ಮಾತನಾಡಿದ ನಟಿ ಜಯಮಾಲಾ
🎬 Watch Now: Feature Video
ಬೆಂಗಳೂರು: ಯಾವುದೇ ಸಭೆ, ಸಮಾರಂಭಗಳೇ ಇರಲಿ, ಅಲ್ಲಿ ಶಿವರಾಮಣ್ಣ ಇರಬೇಕು. ನಾವು 'ತಾಯಿ ಸಾಹೇಬ' ಸಿನಿಮಾದಲ್ಲಿ ನಟಿಸಿದ್ದೆವು. ಅವರ ಕೆಲಸ ಮುಗಿದರೂ ಕೂಡ ಕೆಲಸಗಳನ್ನು ಮಾಡ್ತಿದ್ರು. ಇಡೀ ಚಿತ್ರರಂಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರ ಕೊಡುಗೆ ಅಪಾರ. ತನಗಾಗಿ ಏನನ್ನೂಕೇಳಿಲ್ಲ, ಯಾವುದೇ ಕಲಾವಿದರು ತೊಂದರೆಯಲ್ಲಿದ್ದರೆ ಕರೆ ಮಾಡಿ ವಿಚಾರಿಸುತ್ತಿದ್ದರು. ಎಲ್ಲರಿಗೆ ಹೆಗಲು ಕೊಟ್ಟ ಜೀವ ಇಂದು ತಣ್ಣಗೆ ಮಲಗಿದೆ ಎಂದು ಹಿರಿಯ ನಟಿ ನಟಿ ಜಯಮಾಲಾ ಭಾವುಕರಾದರು.