ಕಾನೂನಿನ ಮೇಲೆ ನಂಬಿಕೆಯಿದೆ, ಸತ್ಯಕ್ಕೆ ಜಯ ಸಿಗಲಿದೆ: ರಾಗಿಣಿ - ನಟಿ ರಾಗಿಣಿ ದ್ವಿವೇದಿ ಜೈಲು
🎬 Watch Now: Feature Video
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬರೋಬ್ಬರಿ 147 ದಿನಗಳ ಕಾಲ ಜೈಲು ವಾಸದ ಬಳಿಕ ನಟಿ ರಾಗಿಣಿ ದ್ವಿವೇದಿ ಮನೆಗೆ ಮರಳಿದ್ದಾರೆ. ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ಯಲಹಂಕದಲ್ಲಿರುವ ಅನನ್ಯ ಅಪಾರ್ಟ್ಮೆಂಟ್ಗೆ ರಾಗಿಣಿ ತಮ್ಮ ಅಪ್ಪ, ಅಮ್ಮನ ಜೊತೆ ಬಂದರು. ಬಿಡುಗಡೆ ಖುಷಿಯಲ್ಲಿದ್ದ ಅವರ ಅಭಿಮಾನಿಗಳು ಅಪಾರ್ಟ್‌ಮೆಂಟ್ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ರಾಗಿಣಿ, ಸತ್ಯ ಗೊತ್ತಾಗುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಕಾನೂನಿನ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.