ಅಭಿಮಾನಿಗಳ ಜೊತೆ ಯುವರಾಜನ ಬರ್ತ್ ಡೇ ಸಂಭ್ರಮ - ನಿಖಿಲ್ ಕುಮಾಸ್ವಾಮಿ ಹುಟ್ಟು ಹಬ್ಬ
🎬 Watch Now: Feature Video
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ನಿನ್ನೆಯಷ್ಟೇ ಸಾವಿರಾರು ಅಭಿಮಾನಿಗಳ ಜೊತೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ರು. ಜೆ.ಪಿ ನಗರದ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ 31ನೇ ಹುಟ್ಟು ಹಬ್ಬವನ್ನ ಸೆಲೆಬ್ರೆಟ್ ಮಾಡಿಕೊಂಡಿದ್ರು. ಯುವರಾಜನ ಹುಟ್ಟು ಹಬ್ಬಕ್ಕೆ ಬಗೆ ಬಗೆಯ ಗಿಫ್ಟ್ ಹಾಗೂ ಕೇಕ್ಗಳನ್ನು ತಂದು, ಅಭಿಮಾನಿಗಳು ಸಂಭ್ರಮಿಸಿದ್ರು. ಒಂದು ಕಡೆ ರಕ್ತದಾನ, ಅನ್ನದಾನ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದು ಕಡೆ ನಿಖಿಲ್ ಹುಟ್ಟು ಹಬ್ಬಕ್ಕೆ ಆಗಮಿಸಿರುವ ಅಭಿಮಾನಿಗಳನ್ನು ನೋಡಿ, ನಿಖಿಲ್ ಪತ್ನಿ ರೇವತಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಸಂತೋಷಗೊಂಡಿದ್ರು. ಈ ಅಪರೂಪದ ಸುಂದರ ಕ್ಷಣಗಳ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ನಿಖಿಲ್ ಕುಮಾರಸ್ವಾಮಿ ಬರ್ತ್ ಡೇ ಕಲರ್ ಫುಲ್ ಝಲಕ್ ಇದು.