ಆರೋಪ ಮಾಡುವ ಮುನ್ನ ಇಂದ್ರಜಿತ್ ಮೊದಲು ಚಿತ್ರರಂಗದ ಗಮನಕ್ಕೆ ತರಬೇಕಿತ್ತು: ಜೈರಾಜ್ - Jairaj has spoken about the drug mafia
🎬 Watch Now: Feature Video
ಬೆಂಗಳೂರು: ಚಿತ್ರರಂಗದಲ್ಲಿ ಏನೇ ಸಮಸ್ಯೆಗಳು ಇದ್ರು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೊದಲು ಫಿಲ್ಮ್ ಚೇಂಬರ್ಗೆ ಬರಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಚಿತ್ರರಂಗದ ಬಗ್ಗೆ ಆರೋಪ ಮಾಡಿದ್ದು ಸರಿ ಅಲ್ಲ. ಒಂದು ವೇಳೆ ಇಂದ್ರಜಿತ್ ಆರೋಪದಲ್ಲಿ ತಿರುಳಿಲ್ಲ ಎಂಬುದು ಸಾಬೀತಾದ್ರೆ ಮತ್ತೆ ಎಲ್ಲರ ಜೊತೆ ಸಭೆ ನಡೆಸಿ ವಾಣಿಜ್ಯ ಮಂಡಳಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ ಆರ್ ಜೈರಾಜ್ ಹೇಳಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಇಂತಹ ಆರೋಪ ಬಂದಿರುವುದು ಇದೇ ಮೊದಲು ಎಂದು ತಿಳಿಸಿದರು.