ಅಂಧ ಹೆಣ್ಣು ಮಕ್ಕಳಿಗೆ ಮನೆ ಹಸ್ತಾಂತರ ಮಾಡಿದ ಜಗ್ಗೇಶ್ - ಅಂಧ ಹೆಣ್ಣು ಮಕ್ಕಳಿಗೆ ಮನೆ ಹಸ್ತಾಂತರ ಮಾಡಿದ ಜಗ್ಗೇಶ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6381625-thumbnail-3x2-giri.jpg)
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯಲ್ಲಿರುವ ರತ್ನಮ್ಮ ಮತ್ತು ಮಂಜಮ್ಮ ಅಂಧ ಗಾಯಕಿಯರ ಮನೆಯನ್ನು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ದುರಸ್ತಿಪಡಿಸಲಾಗಿದ್ದು, ಇಂದು ಮನೆಯನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಡಿವಿ ಹಳ್ಳಿಗೆ ಬಂದ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಗ್ರಾಮದ ಕೆಂಪಮ್ಮ ದೇಗುಲಕ್ಕೆ ಭೇಟಿ ನೀಡಿ ಸುಮಾರು 500 ಮೀಟರ್ ದೂರದಲ್ಲಿದ್ದ ಅಂಧ ಗಾಯಕಿಯರ ಮನೆಗೆ ಕಾಲ್ನಡಿಗೆಯಲ್ಲಿ ಹೋಗಿ, ಮನೆಯ ಹೊಸ್ತಿಲ ಬಳಿ ಟೇಪ್ ಕತ್ತರಿಸಿ, ಹೆಣ್ಣು ಮಕ್ಕಳಿಗೆ ಅಕ್ಷತೆ ಹಾಕುವ ಮೂಲಕ ಮನೆ ಹಸ್ತಾಂತರಿಸಿದರು.
TAGGED:
Tumakuru