ಕನ್ನಡದ 'ಅಕ್ಷಿ' ಅತ್ಯುತ್ತಮ ಚಿತ್ರ: ಈಟಿವಿ ಭಾರತ ಜತೆ ನಿರ್ದೇಶಕ ಮನೋಜ್ ಮಾತು - ನಿರ್ದೇಶಕ ಮನೋಜ್ ಮಾತು
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಚಿತ್ರ ಎಂದು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿರುವ ಚಿತ್ರ ಅಕ್ಷಿ. ನೇತ್ರಾದಾನದ ಅರಿವು ಮೂಡಿಸುವ ಕಥೆ ಆಧರಿಸಿರೋ ಈ ಸಿನಿಮಾಕ್ಕೆ ಈ ರಾಷ್ಟ್ರ ಪ್ರಶಸ್ತಿ ಬಂದಿರುವುದು ಯುವ ನಿರ್ದೇಶಕ ಮನೋಜ್ ಕುಮಾರ್ಗೆ ತುಂಬ ಖುಷಿಯಾಗಿದೆ. ತಮ್ಮ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರೋ ಹಿನ್ನಲೆಯಲ್ಲಿ ಈಟಿವಿ ಭಾರತ ಜೊತೆ ಮನೋಜ್ ಕುಮಾರ್ ಸಂತೋಷ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಶುರುವಾಗಿದ್ದು ಹೇಗೆ? ಯಾರೆಲ್ಲ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ? ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಎಲ್ಲಿ ಆಗಿದೆ? ತಮ್ಮ ಅಕ್ಷಿ ಸಿನಿಮಾದ ಹಿಂದೆ ಯಾರೆಲ್ಲ ಕೆಲಸ ಮಾಡಿದ್ದಾರೆ ಅನ್ನೋದನ್ನ ನಿರ್ದೇಶಕ ಮನೋಜ್ ಕುಮಾರ್ ಹಂಚಿಕೊಂಡಿದ್ದು ಹೀಗೆ.