‘ಮದಗಜ’ನ ಡೈಲಾಗ್ಗೆ ಫಿದಾ ಆದ ಅಭಿಮಾನಿಗಳು - Kannada new movie news
🎬 Watch Now: Feature Video
ಚಾಮರಾಜನಗರ : ಮದಗಜ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟ ಶ್ರೀಮುರುಳಿ ಅವರನ್ನು ನೋಡಲು 2ನೇ ದಿನವೂ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರೊಂದಿಗೆ ಶೂಟಿಂಗ್ ಮುಗಿಸಿದ ಬಳಿಕ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಬೇಡಿಕೆಗೆ ಮಣಿದು ಖಡಕ್ ಡೈಲಾಗ್ಗಳನ್ನು ಹೇಳಿ ರಂಜಿಸಿದರು ಶ್ರೀಮುರಳಿ. ಶನಿವಾರ ಜಗಪತಿಬಾಬು ಅವರೊಂದಿಗೆ ಚೇಸಿಂಗ್ ಸನ್ನಿವೇಶದ ಚಿತ್ರೀಕರಣ ಹಂಗಳ ಗ್ರಾಮದಲ್ಲಿ ನಡೆದಿತ್ತು. ಮಹೇಶ್‌ಕುಮಾರ್ ನಿರ್ದೇಶನದ ಉಮಾಪತಿ ಬ್ಯಾನರ್ನಲ್ಲಿ ಮದಗಜ ಚಿತ್ರ ನಿರ್ಮಾಣವಾಗುತ್ತಿದೆ.