ತುಮಕೂರಿನಲ್ಲಿ ಅಪ್ಪು ಹವಾ: ಇಷ್ಟೊಂದು ಜನ್ರ ಪ್ರೀತಿ ಇದೆ, ರಾಜಕೀಯ ಯಾಕ್ರೀ ಬೇಕು ಎಂದ ಪುನೀತ್! - ತುಮಕೂರಿನಲ್ಲಿ ಅಪ್ಪು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11117766-thumbnail-3x2-wdfdfdfd.jpg)
ತುಮಕೂರು: ಏಪ್ರಿಲ್ 1 ರಂದು ರಾಜ್ಯಾದ್ಯಂತ ತೆರೆಕಾಣಲಿರುವ 'ಯುವರತ್ನ' ಚಲನಚಿತ್ರದ ಪ್ರಮೋಷನ್ಗಾಗಿ ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ತುಮಕೂರು ನಗರಕ್ಕೆ ಭೇಟಿ ನೀಡಿದ್ರು. ಇಲ್ಲಿನ ಎಸ್ಐಟಿ ಇಂಜಿನಿಯರಿಂಗ್ ಕಾಲೇಜಿನ ಆಟದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.ಈ ಸಂದರ್ಭದಲ್ಲಿ ನೆಚ್ಚಿನ ನಟನಿಗೆ ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಪಟ್ಟರು. ಇದೇ ವೇಳೆ ಮಾತನಾಡಿದ ಅವರು, ಅಭಿಮಾನಿಗಳು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಸೇರಿರುವ ಎಲ್ಲ ಅಭಿಮಾನಿಗಳಿಗೂ ಥ್ಯಾಂಕ್ಸ್ ಹೇಳುವೆ ಎಂದರು. ಜತೆಗೆ ಏಪ್ರಿಲ್ 1ರಂದು ಯುವರತ್ನ ತೆರೆ ಮೇಲೆ ಬರುತ್ತಿದ್ದು, ನೋಡಿ ಆಶೀರ್ವಾದ ಮಾಡಿ ಎಂದರು. ಜತೆಗೆ ಇಷ್ಟೊಂದು ಜನರ ಪ್ರೀತಿ ವಿಶ್ವಾಸವಿದೆ. ರಾಜಕೀಯ ಯಾಕ್ರೀ ಬೇಕು ಎಂದರು. ಪುನೀತ್ ರಾಜ್ಕುಮಾರ್ ಜತೆ ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ ಹಾಗೂ ಸಹನಟರು ಪಾಲ್ಗೊಂಡಿದ್ದರು.