ಶ್ರದ್ಧಾ-ಭಕ್ತಿಯಿಂದ ಜೈಲಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಿದ ಕೈದಿಗಳು - ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಖೈದಿಗಳು ಶಿವರಾತ್ರಿ ಹಬ್ಬ ಆಚರಿಸಿದರು
🎬 Watch Now: Feature Video
ಬೆಂಗಳೂರು : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಭಕ್ತಿಪೂರ್ವಕವಾಗಿ ಹಬ್ಬ ಆಚರಣೆ ಮಾಡಿದರು. ಆರಾಧ್ಯದೈವ ಶಿವನಿಗೆ ಸಕಲ ರೀತಿಯ ಹೂವಿನ ಅಲಂಕಾರ ಮಾಡಿ ಶ್ರದ್ದಾಪೂರ್ವಕವಾಗಿ ನಮಿಸಿದರು. ಜೈಲಿನ ಆವರಣದಲ್ಲಿರುವ ದೇವಸ್ಥಾನದ ಮುಂದೆ ಸಜಾಬಂಧಿಗಳು ಒಗ್ಗೂಡಿ ಹಾರ್ಮೋನಿಯಂ ನುಡಿಸಿ ಧಮಡಿ ಭಾರಿಸಿ ದೇವರ ಶ್ಲೋಕ ಪಠಿಸಿ ದೇವರ ಕೃಪೆಗೆ ಪಾತ್ರರಾದರು. ಪ್ರತಿವರ್ಷವೂ ಸಜಾಬಂಧಿಗಳು ಸಂಭ್ರಮದಿಂದ ಇಲ್ಲಿ ಹಬ್ಬ ಆಚರಿಸ್ತಾರೆ.
Last Updated : Feb 3, 2023, 8:18 PM IST