224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ: ಜಮೀರ್ ಅಹ್ಮದ್ - ತುಮಕೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17635028-thumbnail-3x2-am.jpg)
ತುಮಕೂರು: 224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ. ಮೊನ್ನೆ ನಾನು ಹೇಳಿದ್ದೇನೆ, ಬೇಕಾದರೆ ಕೋಲಾರಕ್ಕೆ ನಾನು ಹೋಗುತ್ತೇನೆ. ಚಾಮರಾಜಪೇಟೆಗೆ ನೀವು ಬನ್ನಿ ಸರ್ ಅಂತ ನಾನು ಹೇಳಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅವರು ಎಲ್ಲಿ ನಿಂತರೂ ಈ ಬಾರಿ ಗೆಲ್ತಾರೆ. ಹಾಗೆ ದಿನಾಂಕ 3 ರಿಂದ 13 ರವರೆಗೆ ಸಿದ್ದರಾಮಯ್ಯ ಜೊತೆಗೇ ಟೂರ್ ಹಾಕಿಕೊಂಡಿದ್ದೇನೆ ಎಂದರು.
ರಾಜಕಾರಣಿಗಳ ಹೇಳಿಕೆ ವಿಚಾರವೊಂದಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನೋಡಿ ಯಾರನ್ನು ಯಾರು ಮುಗಿಸೋಕೆ ಆಗಲ್ಲ. ದೇವರೊಬ್ಬರಿಂದ ಮಾತ್ರ ಸಾಧ್ಯ. ಮನುಷ್ಯನನ್ನು ಮನುಷ್ಯನಿಂದ ಮುಗಿಸೋಕೆ ಸಾಧ್ಯನೆ ಇಲ್ಲ. ದೇವರಿಂದನೇ ಮಾತ್ರ ಸಾಧ್ಯ. ಬರೀ ಬಾಯಿ ಮಾತದು ಎಂದರು.
ಇದನ್ನೂ ಓದಿ:ಹಿಂದೂ ಧರ್ಮ ಟೀಕಿಸುವವರು ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಅನ್ನಲಿ: ಕಟೀಲ್ ಸವಾಲು