ನೂರು ಬೆಡ್ ಆಸ್ಪತ್ರೆಬೇಕು ಎಂದು ತಮಟೆ ಪ್ರಚಾರ ಮಾಡಿದ ಯುವಕರು - ಧರಣಿ ಸತ್ಯಾಗ್ರಹ
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಯುವಕರು ಮತ್ತೆ ನೂರು ಬೆಡ್ ಆಸ್ಪತ್ರೆ ಹೋರಾಟಕ್ಕೆ ಮುಂದಾಗಿದ್ದಾರೆ. ತಮಟೆ ಬಾರಿಸುತ್ತ ಧರಣಿ ಸತ್ಯಾಗ್ರಹದ ಬಗ್ಗೆ ಯುವಕರ ತಂಡ ಪ್ರಚಾರ ನಡೆಸುತ್ತಿದ್ದು, ಶೃಂಗೇರಿಯ ಬೀದಿ ಬೀದಿಯಲ್ಲಿ ಸುತ್ತಿ ತಮಟೆ ಪ್ರಚಾರ ಮಾಡುತ್ತಿದ್ದಾರೆ. ಶೃಂಗೇರಿ ತಾಲೂಕಿನಾದ್ಯಂತ ಪ್ರಚಾರ ಮಾಡಲು ಯುವಕರು ಮುಂದಾಗಿದ್ದು, ಮೈಕ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಯುವಕರು ತಮಟೆ ಮೊರೆ ಹೋಗಿದ್ದಾರೆ.
Last Updated : Feb 3, 2023, 8:33 PM IST