ರೈಲ್ವೆ ಟ್ರ್ಯಾಕ್ನಲ್ಲಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ಸಿನಿಮೀಯ ರೀತಿಯಲ್ಲಿ ರಕ್ಷಣೆ! - ETV Bharath Kannada news
🎬 Watch Now: Feature Video
ದಾವಣಗೆರೆ: ರೈಲು ಬರುವುದನ್ನು ಗಮನಿಸಿದ ಯುವಕನೋರ್ವ ರೈಲಿಗೆ ತಲೆ ಕೊಡಲು ಹಳಿ ಮೇಲೆ ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಿಸಿರುವ ಘಟನೆ ದಾವಣಗೆರೆ ನಗರದ ಅಶೋಕ ಚಿತ್ರ ಮಂದಿರ ಬಳಿಯ ರೈಲ್ವೇ ಗೇಟ್ನಲ್ಲಿಂದು ನಡೆಯಿತು. ಆತ್ಮಹತ್ಯೆಗೆ ಯತ್ನಿಸಿದ ಯುವಕ ಯಾರೆಂಬುದರ ಮಾಹಿತಿ ಲಭ್ಯವಾಗಿಲ್ಲ. ರೈಲ್ವೇ ನಿಲ್ದಾಣದಲ್ಲಿ ತಂಗಿದ್ದ ಎಕ್ಸ್ಪ್ರೆಸ್ ರೈಲು ಹೊರಡುವುದನ್ನು ಗಮನಿಸಿ, ರೈಲು ನೂರು ಮೀಟರ್ ದೂರವಿರುವಾಗ ಯುವಕ ಹಳಿ ಮೇಲೆ ಮಲಗಿದ್ದಾನೆ. ಸ್ಥಳೀಯರು ಕೂಗಿಕೊಂಡರೂ ಕ್ಯಾರೆನ್ನದೆ ಆತ ಮಲಗಿದ್ದು ಅಲ್ಲೇ ಇದ್ದ ಮೂವರು ಓಡಿ ಹೋಗಿ ಬಚಾವ್ ಮಾಡಿದ್ದಾರೆ. ಯುವಕನನ್ನು ರಕ್ಷಿಸಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ.
ಇದನ್ನೂ ಓದಿ: Watch: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು