ಅದ್ದೂರಿಯಾಗಿ ಜರುಗಿದ ಸದ್ಗುರು ಶ್ರೀ ಯೋಗಿ ನಾರೇಯಣ ರಥೋತ್ಸವ - Etv Bharat Kannada
🎬 Watch Now: Feature Video
ಕೆ.ಆರ್.ಪುರ (ಬೆಂಗಳೂರು): ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಬಲಿಜಿಗ ಸಮುದಾಯದ ವತಿಯಿಂದ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಬೆಂಗಳೂರು ಪೂರ್ವ ತಾಲೂಕಿನ ಬಲಿಜಿಗ ಸಮುದಾಯದವರು ಸೇರಿ ಕಾರ್ಯಕ್ರಮ ನಡೆಸಿದರು. ಕೆ.ಆರ್.ಪುರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು.
ಸಮುದಾಯದ ಹಿರಿಯ ಮುಖಂಡ ಎಂ.ಎಲ್.ಡಿ.ಸಿ.ಮುನಿರಾಜು ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಕೈವಾರ ತಾತಯ್ಯ ಮಾಡಿದ ಕಾರ್ಯಗಳು ಅಮೋಘ ಮತ್ತು ಶ್ಲಾಘನೀಯ. ಶ್ರೀ ಯೋಗಿ ನಾರೇಯಣ ರಚಿಸಿರುವ ಕಾಲಜ್ಞಾನ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿದರೆ ನಮಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೈವಾರ ತಾತಯ್ಯ ನವರ ಕಾಲಜ್ಞಾನದ ಮಹತ್ವ ಮತ್ತು ವ್ಯಾಪ್ತಿ ಬಹಳ ಅಗಾಧವಾದದ್ದು. ಅವರ ಚರಿತ್ರೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಅವರು ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಬಲ್ಲವರಾಗಿದ್ದರು. ಭವಿಷ್ಯದಲ್ಲಿ ಘಟಿಸಲಿರುವ ಅನಾಹುತ, ಆಗುಹೋಗುಗಳ ಮೊದಲಾದ ಘಟನೆಗಳ ಬಗ್ಗೆ ಕಾಲಜ್ಞಾನ ಮೂಲಕ ಎಚ್ಚರಿಸಿದರು. ನಮಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರ ಕಾಲಜ್ಞಾನದ ಸೂಕ್ತ ಅಧ್ಯಯನವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೂಲಹಳ್ಳಿ ಗೋಣಿಬಸವೇಶ್ವರ ಅದ್ಧೂರಿ ರಥೋತ್ಸವ.. ದ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಜನಸಾಗರ