ಪಿಯು ಫಲಿತಾಂಶ: ವಿಜ್ಞಾನ ವಿಭಾಗದ ಯೋಗೀಶ್​ ರಾಜ್ಯಕ್ಕೆ 3ನೇ ಟಾಪರ್​..

🎬 Watch Now: Feature Video

thumbnail

By

Published : Apr 21, 2023, 4:42 PM IST

ಬಂಟ್ವಾಳ: ಬಂಟ್ವಾಳ ತಾಲೂಕು ಅಳಿಕೆಯ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯೋಗೀಶ್ ತುಕಾರಾಮ ಬಡಚಿ ಅವರು ವಿಜ್ಞಾನ ವಿಭಾಗದ ಪಿಯುಸಿ ಪರೀಕ್ಷೆಯಲ್ಲಿ 594 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಶಿಕ್ಷಕ ತುಕಾರಾಮ ಬಡಚಿ ಮತ್ತು ಪುಷ್ಪಾ ಬಡಚಿ ದಂಪತಿಯ ಪುತ್ರನಾಗಿರುವ ಯೋಗೀಶ್ ಕನ್ನಡದಲ್ಲಿ 96, ಇಂಗ್ಲೀಷ್ ನಲ್ಲಿ 98, ಭೌತಶಾಸ್ತ್ರ 100, ಗಣಿತ 100, ರಸಾಯನಶಾಸ್ತ್ರ 100 ಮತ್ತು ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದ ಎಲ್ಲ ಪಠ್ಯಗಳಲ್ಲೂ ಶೇ.100ರಷ್ಟು ಅಂಕ ಗಳಿಸಿದ್ದಾರೆ.

ಪಿಯುಸಿ ಟಾಪರ್​ ಯೋಗೀಶ್ ಮಾತನಾಡಿ, ನನಗೆ ವೈದ್ಯನಾಗಬೇಕು ಎಂಬ ಆಸೆ ಇದ್ದು, ಅದಕ್ಕಾಗಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದರು. ನನ್ನ ತಂದೆಯವರು ಹೈಸ್ಕೂಲ್ ಟೀಚರ್ ಆಗಿದ್ದಾರೆ. ನಮ್ಮೂರಿನ ಕೆಲ ಹುಡುಗರು ಅಳಕೆಯಲ್ಲಿ ವಿದ್ಯಾಭ್ಯಾಸ ಮಾಡಿ, ಉತ್ತಮ ಅಂಕಗಳನ್ನು ಗಳಿಸಿರುವುದನ್ನು ಗುರುತಿಸಿದ ನನ್ನ ತಂದೆಯವರು, ನನ್ನನ್ನೂ ಆರನೇ ಕ್ಲಾಸಿಗೆ ಅಳಕೆ ವಿದ್ಯಾಸಂಸ್ಥೆಗೆ ಸೇರಿಸಿದರು. ನನಗೆ ಇದು ತುಂಬಾ ಅನುಕೂಲವಾಯಿತು. ನನ್ನ ವಿದ್ಯಾಭ್ಯಾಸಕ್ಕೆ ಸ್ಪಷ್ಟ ದಿಕ್ಕನ್ನು ಸಂಸ್ಥೆಯ ಶಿಕ್ಷಣ ವ್ಯವಸ್ಥೆ ನೀಡಿದ್ದು, ಉತ್ತಮ ಜೀವನಶೈಲಿಯನ್ನೂ ರೂಢಿಸಿಕೊಳ್ಳುವಲ್ಲಿ ಸಹಕರಿಸಿದೆ. ನನಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಏಕಾಗ್ರತೆಯನ್ನು ಬೆಳೆಸುವಲ್ಲಿ ಅಳಕೆ ಸಂಸ್ಥೆ ಸಹಕಾರಿಯಾಗಿದ್ದು, ನನ್ನ ಪ್ರಗತಿಗೆ ಇಲ್ಲಿನ ಎಲ್ಲ ಶಿಕ್ಷಕ ವೃಂದ ಸಹಕರಿಸಿದ್ದಾರೆ. ಅವರಿಗೆ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ ಕೆಪಿಸಿಸಿ ವಕ್ತಾರ ಶಾಂತವೀರಪ್ಪ: ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ ಗೌಡ್ರು..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.