ಹುಲಿವೇಷ ಕುಣಿತಕ್ಕೆ ಸ್ಟೆಪ್ ಹಾಕಿದ ಯುವತಿಯರು - ವಿಡಿಯೋ ವೈರಲ್ ಮಂಗಳೂರಿನಲ್ಲಿ ಹುಲಿ ನೃತ್ಯ ಮಾಡಿದ ಯುವತಿಯರು - ಈಟಿವಿ ಭಾರತ ಕನ್ನಡ
🎬 Watch Now: Feature Video
ಮಂಗಳೂರು: ನಗರದಲ್ಲಿ ಹುಲಿವೇಷ ಕುಣಿತಕ್ಕೆ ಯುವತಿಯರು ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನಲ್ಲಿ ನವರಾತ್ರಿ ಹಿನ್ನೆಲೆ ಹುಲಿವೇಷದಾರಿಗಳ ಕುಣಿತ ಎಲ್ಲೆಡೆ ಕಾಣಸಿಗುತ್ತದೆ. ಸುಮಾರು ಹದಿನೈದು ಮಂದಿಯ ಹುಲಿ ವೇಷದಾರಿಗಳ ತಂಡ ಮನೆ, ಅಂಗಡಿಗಳಿಗೆ ತೆರಳಿ ಕುಣಿಯುತ್ತಾರೆ. ಹುಲಿವೇಷದ ತಂಡವೊಂದು ಮಂಗಳೂರಿನ ಬಿಜೈನಲ್ಲಿ ಕುಣಿತ ಮಾಡುತ್ತಿದ್ದಾಗ ಸ್ಥಳೀಯ ಜಯಲಕ್ಷ್ಮಿ ಸಿಲ್ಕ್ಸ್ನ ಸಿಬ್ಬಂದಿಗಳಾದ ಯುವತಿಯರು ಹುಲಿವೇಷ ಕುಣಿತಕ್ಕೆ ಉತ್ಸಾಹದಿಂದ ಸ್ಟೆಪ್ ಹಾಕಿದ್ದಾರೆ. ನಾಲ್ಕು ಮಂದಿ ಯುವತಿಯರು ತಾಸೆ ಬ್ಯಾಂಡ್ಗೆ ಸ್ಟೆಪ್ ಹಾಕಿದ್ದು, ಇದನ್ನು ಸಾರ್ವಜನಿಕರು ನೋಡಿ ಖುಷಿಪಟ್ಟಿದ್ದಾರೆ. ಇದರ ವಿಡಿಯೋವನ್ನು ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:28 PM IST