ಸೀರೆ ಹಂಚಲು ಬಂದವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ: ವಿಡಿಯೋ ವೈರಲ್
🎬 Watch Now: Feature Video
ವಿಜಯಪುರ : ಸೀರೆ ಹಂಚಲು ಬಂದಿದ್ದ ಪಕ್ಷವೊಂದರ ಕಾರ್ಯಕರ್ತರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಮೈಬೂಬ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೀರೆ ಹಂಚಲು ಬಂದ ಪಕ್ಷದ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿರುವ ಮಹಿಳೆ, ಐದು ವರ್ಷ ಎಲ್ಲಿ ಹೋಗಿದ್ರಿ?. ಒಂದು ಆಶ್ರಮ ಮನೆ ಹಾಕಿ ಕೊಡಲಿಲ್ಲ. ಈಗ ಸೀರೆ ಹಂಚೋಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಹಿಳೆಗೆ ಸಮಜಾಯಿಸಿ ನೀಡಲು ಬಂದ ಕಾರ್ಯಕರ್ತನ ಮಾತಿಗೆ ಸೊಪ್ಪು ಹಾಕದೇ ನಿಮ್ಮ ಸೀರೆ ಬೇಡ ಎಂದು ತಿರಸ್ಕರಿಸಿದ್ದಾರೆ. ಮಹಿಳೆ ಜತೆ ಧ್ವನಿಗೂಡಿಸಿದ ಅವರ ಪುತ್ರ ಹಾಗೂ ಸ್ಥಳೀಯರು, ಜೋರು ಮಾಡಿದವರ ಕೆಲಸ ಮಾತ್ರ ಮಾಡುತ್ತೀರಿ. ನಮ್ಮಂಥವರ ಕೆಲಸ ಮಾಡಲ್ಲ ಎಂದರು. ಸೀರೆ ಕೊಳ್ಳಲು ನಮ್ಮ ಬಳಿ ಹಣವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಈ ಸನ್ನಿವೇಶದ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಇದನ್ನೂ ಓದಿ : ಗುಜರಾತ್ ಚುನಾವಣೆ: ಮತದಾರರಿಗೆ ಹಣ ಹಂಚಿದ ಆರೋಪ.. ವಿಡಿಯೋ ವೈರಲ್!