ಆನೇಕಲ್ ಗಡಿ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಉಪಟಳ - wild elephants damage crops
🎬 Watch Now: Feature Video
ಆನೇಕಲ್: ಕಳೆದ ಹದಿನೈದು ದಿನಗಳಿಂದ ಆನೇಕಲ್ ಗಡಿ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಹೊಸೂರು, ಡೆಂಕಣಿಕೋಟೆ, ತಳಿ ಭಾಗದಲ್ಲಿ ಐದಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ. ನಿನ್ನೆಯಷ್ಟೇ ಮೂರು ಆನೆಗಳು ಗುರುಪರಪಲ್ಲಿ ಗ್ರಾಮದಲ್ಲಿ ಓಡಾಟ ನಡೆಸಿದ್ದು, ಡೆಲ್ಟಾ ಕಂಪನಿ ಬಳಿ ಕಾಣಿಸಿಕೊಂಡಿವೆ. ಜೊತೆಗೆ ರೈತರ ಬೆಳೆ ನಾಶಪಡಿಸಿದ್ದು, ಪಟಾಕಿ ಸಿಡಿಸಿ ಗಜಪಡೆ ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
Last Updated : Feb 3, 2023, 8:32 PM IST