ನೀರಿನ ತೊಟ್ಟಿಯಲ್ಲಿ ಸಿಲುಕಿದ್ದ ಕಾಡಾನೆ ಮರಿಯ ರಕ್ಷಣೆ -ವಿಡಿಯೋ - ETV Bharat Kannada News

🎬 Watch Now: Feature Video

thumbnail

By

Published : Jun 26, 2023, 4:58 PM IST

ಜೋರ್ಹತ್ : ಅಸ್ಸೋಂ ತನ್ನ ಶ್ರೀಮಂತ ನೈಸರ್ಗಿಕ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ ಅನೇಕ ಕಾಡು ಪ್ರಾಣಿಗಳ ಗುಹೆಯನ್ನು ಹೊಂದಿದೆ. ಇಲ್ಲಿ ಹೆಸರುವಾಸಿಯಾಗಿರುವ ಅಂತಹದ್ದೇ ಒಂದು ಪ್ರಾಣಿ ಆನೆ. ರಾಜ್ಯವು ವಿಶೇಷವಾಗಿ ಮಳೆಗಾಲದಲ್ಲಿ ಮನುಷ್ಯ ಆನೆ ಸಂಘರ್ಷದ ಸಾಕಷ್ಟು ನಿದರ್ಶನಗಳಿಗೆ ಸಾಕ್ಷಿಯಾಗಿದೆ. ಪ್ರವಾಹದ ಸಮಯದಲ್ಲಿ ಇತರ ಅನೇಕ ಪ್ರಾಣಿಗಳಂತೆ, ಆನೆಗಳ ಹಿಂಡುಗಳು ಸಹ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡಿನಿಂದ ಮಾನವ ವಾಸಿಸುವ ಪ್ರದೇಶಗಳಿಗೆ ಬರುತ್ತವೆ. ಆದರೆ ಅನೇಕ ಸಂದರ್ಭಗಳಲ್ಲಿ ತಮ್ಮ ಆಹಾರವನ್ನು ಹುಡುಕುವ ಇಂತಹ ಪ್ರಾಣಿಗಳು ತೊಂದರೆಗೆ ಸಿಲುಕಿಕೊಳ್ಳುತ್ತವೆ.

ನೀರಿನ ತೊಟ್ಟಿಯಲ್ಲಿ ಬಿದ್ದು ಪರದಾಡಿದ ಆನೆಮರಿ: ಅಂತಹ ಒಂದು ನಿದರ್ಶನ ಇಂದು (ಸೋಮವಾರ) ನಡೆದಿದೆ. ರಾಜ್ಯದ ಜೋರ್ಹತ್ ಜಿಲ್ಲೆಯ ಮರಿಯಾನಿಯಲ್ಲಿರುವ ಹುಲೊಂಗುರಿ ಟೀ ಎಸ್ಟೇಟ್‌ನಲ್ಲಿನ ನೀರಿನ ತೊಟ್ಟಿಯಲ್ಲಿ ಕಾಡು ಆನೆ ಮರಿ ಬಿದ್ದಿದ್ದು, ಸಾವು ಬದುಕಿನ ನಡುವೆ ಹೋರಾಡಿದೆ. ಟೀ ಗಾರ್ಡನ್ ಬಳಿ ಇರುವ ಗಿಬ್ಬನ್ ಅಭಯಾರಣ್ಯದಿಂದ ಹೊರಬಂದ ಆನೆ ಮರಿ ಇದ್ದಕ್ಕಿದ್ದಂತೆ ತೋಟದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದೆ. ಸಾಕಷ್ಟು ಪ್ರಯತ್ನ ಮಾಡಿದರೂ ಆನೆ ಮರಿ ನೀರಿನ ತೊಟ್ಟಿಯಿಂದ ಹೊರಬರಲು ಸಾಧ್ಯವಾಗದೆ ಹಲವು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿತ್ತು. 

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ ಅವರು ಘಟನಾ ಸ್ಥಳಕ್ಕೆ ಆಗಮಿಸುವುದು ತಡವಾಗಿತ್ತು. ಹೀಗಾಗಿ ಸ್ಥಳೀಯರೇ ಆನೆ ಮರಿಯನ್ನು ರಕ್ಷಿಸಿ ಪಕ್ಕದ ಗಿಬ್ಬನ್ ವನ್ಯಜೀವಿಧಾಮಕ್ಕೆ ಬಿಟ್ಟಿದ್ದಾರೆ. 

ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯ: ಒಂದು ವರ್ಷದ ಹಿಂದೆ ಜಿಲ್ಲೆಯ ಕಥಲಗುರಿ ಟೀ ಎಸ್ಟೇಟ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ತೋಟದ ಅಧಿಕಾರಿಗಳು ಮತ್ತೆ ಅದೇ ತಪ್ಪು ಮಾಡಿದ್ದರು ಮತ್ತು ಅಂತಹ ಘಟನೆ ಮತ್ತೆ ಮರುಕಳಿಸಿದೆ. ಸುರಕ್ಷತಾ ನಿಯಮಗಳ ಕೊರತೆ ಹಾಗೂ ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಪದೇ ಪದೆ ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ - ಸಿಕ್ಕ ಸಿಕ್ಕ ವಸ್ತುಗಳು ಧ್ವಂಸ- ಗಜರಾಜನ ದಾಂಧಲೆ ನೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.