ಮಹಿಳಾ ದಿನಾಚರಣೆ: ಯಲಹಂಕದಲ್ಲಿ ನಾರಿಯರಿಂದ ಬೃಹತ್ ವಾಕಥಾನ್ - walkathon for world women
🎬 Watch Now: Feature Video
ಯಲಹಂಕ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯಲಹಂಕದ ನವಚೇತನ ಆಸ್ಪತ್ರೆ ವತಿಯಿಂದ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿತ್ತು. ಬೃಹತ್ ವಾಕಥಾನ್ಗೆ ನಟಿ ಅನು ಪ್ರಭಾಕರ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದರು. ನವಚೇತನ ಆಸ್ಪತ್ರೆಯಿಂದ ಯಲಹಂಕ ನಗರದಲ್ಲಿ 3 ಕಿಲೋ ಮೀಟರ್ ವರೆಗೂ ನಡೆದು ಮಹಿಳೆಯರು ಜನ ಜಾಗೃತಿ ಮೂಡಿಸಿದರು. ಎಲ್ಲೆಡೆ ಸಮಾನತೆ ತರುವ ದೃಷ್ಟಿಯಿಂದ ಈ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿದೆ ಎಂದು ನವಚೇತನ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರು ಭಾಗವಹಿಸಿದ್ದರು. ಈ ಬೃಹತ್ ವಾಕಥಾನ್ ನಲ್ಲಿ 1000 ಕ್ಕೂ ಹೆಚ್ಚು ಮಹಿಳೆಯರು, ಶಾಲಾ ಮಕ್ಕಳು ಭಾಗಿಯಾಗಿದ್ದರು. ಅಲ್ಲದೆ ವಾಕಥಾನ್ ಜೊತೆಗೆ ನವಚೇತನ ಆಸ್ಪತ್ರೆಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಬೃಹತ್ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಇಂದು ಇಡೀ ದಿನ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು, ಜನರು ಬಂದು ಪ್ರಯೋಜನ ಪಡೆಯುವಂತೆ ನವಚೇತನ ಆಸ್ಪತ್ರೆ ತಿಳಿಸಿತು.
ಇದನ್ನೂ ಓದಿ:ದೇಶಾದ್ಯಂತ ಬಣ್ಣ ಬಣ್ಣದ ರಂಗಿನ ಹೋಳಿ ಸಡಗರ- ವಿಡಿಯೋ ನೋಡಿ