Viral Video: ಸೋರುತಿದೆ ಶಾಲೆ, ಕೊಡೆ ಹಿಡಿದು ಪಾಠ ಕೇಳುತ್ತಿರುವ ಮಕ್ಕಳು - ಸೋರುತ್ತಿರುವ ಶಾಲೆ
🎬 Watch Now: Feature Video

ಆಂಧ್ರಪ್ರದೇಶ (ವಿಸ್ಸನ್ನಪೇಟೆ) : ಎಷ್ಟೋ ಶಾಲೆಗಳು ಇಂದಿಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಹೊಂದಿಲ್ಲ. ಹೀಗಾಗಿ, ಅನೇಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಆದರೆ, ದುಬಾರಿ ಶಿಕ್ಷಣ ವ್ಯವಸ್ಥೆಯಿಂದಾಗಿ ಬಡ ವಿದ್ಯಾರ್ಥಿಗಳು ವಿಧಿ ಇಲ್ಲದೇ ಸರ್ಕಾರಿ ಶಾಲೆಗಳನ್ನೇ ಆಶ್ರಯಿಸುವಂತಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಕೊಡೆ ಹಿಡಿದು ಮಕ್ಕಳು ಪಾಠ ಕೇಳುತ್ತಿರುವುದನ್ನು ನೋಡಬಹುದು.
ಎನ್ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆ ಜಿಲ್ಲಾ ಪರಿಷತ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಸ್ಥಿತಿ ಹೇಳತೀರದು. ಮೊದಲ ಹಂತದಡಿ 66 ಲಕ್ಷ ರೂ.ಗಳಲ್ಲಿ ಇಲ್ಲಿ ಕಾಮಗಾರಿ ನಡೆದಿದೆ. ಆದರೆ, ತರಗತಿ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ನವೀಕರಣಗೊಂಡಿಲ್ಲ. ಬುಧವಾರ ಬೆಳಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿ ಸೋರುತ್ತಿದ್ದು, ತರಗತಿ ಕೊಠಡಿಗಳಿಗೆ ನೀರು ನುಗ್ಗಿದೆ. ಹೀಗಾಗಿ, ಒದ್ದೆಯಾಗದಂತೆ ವಿದ್ಯಾರ್ಥಿಗಳು ಕೊಡೆ ಹಿಡಿದು ಕುಳಿತಿದ್ದಾರೆ.
ಇದನ್ನೂ ಓದಿ : ಧಾರವಾಡ: ಮಳೆಗೆ ಸೋರುತಿಹುದು ಕಾಲೇಜು ಕೊಠಡಿ.. ಕೊಡೆ ಹಿಡಿದೇ ಪಾಠ ಕೇಳುವ ಪರಿಸ್ಥಿತಿ
ಶಾಲಾ ಆವರಣಕ್ಕೆ ಮಳೆ ನೀರು ನುಗ್ಗಿದ್ದು ಕೆರೆಯಂತಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಚಂದ್ರಶೇಖರ್, ಎಂಪಿಡಿಒ ಎಸ್.ವೆಂಕಟರಮಣ, ಎಂಇಒ ಸುಧಾಕರ್ ನಿನ್ನೆ ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.