ಮಂಡ್ಯ: ಉಪವಿಭಾಗಾಧಿಕಾರಿಗೆ ಗ್ರಾಮಸ್ಥರಿಂದ ಸೀಮಂತ ಶಾಸ್ತ್ರ - ಮಡಿಲು ತುಂಬುವ ಶಾಸ್ತ್ರ
🎬 Watch Now: Feature Video
ಮಂಡ್ಯ: ನಗರದಲ್ಲಿ ಉಪ ವಿಭಾಗಾಧಿಕಾರಿಗೆ ಮಂಡ್ಯ ತಾಲೂಕಿನ ಬೂದನೂರು ನಿವೇಶನರಹಿತ ಮಹಿಳೆಯರು ಸೀಮಂತ ಶಾಸ್ತ್ರ ನೆರವೇರಿಸಿದರು. ಮಂಡ್ಯ ಎಸಿ ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಿಳೆಯರು ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನಾ ಅವರಿಗೆ ಅರಿಸಿನ-ಕುಂಕುಮವಿಟ್ಟು, ಬಳೆ ತೊಡಿಸಿ ಹೂ ಮುಡಿಸಿ ಅಕ್ಷತೆ ಹಾಕಿದರು. ಬಳಿಕ ಅಕ್ಕಿ, ಬೆಲ್ಲ, ಕಾಯಿ, ಕೊಬ್ಬರಿ ಹಾಗೂ ಎಲೆ ಅಡಿಕೆ ಬಾಳೆಹಣ್ಣು ಹಾಗೂ ಸೀರೆ ನೀಡುವ ಮೂಲಕ ಮಡಿಲು ತುಂಬುವ ಶಾಸ್ತ್ರ ಮಾಡಿದರು. ಈ ವೇಳೆ ಬೂದನೂರು ಗ್ರಾಮದ ಮಹಿಳೆಯರ ಪ್ರೀತಿಗೆ ಮನಸೋತ ಕೀರ್ತನಾ ಅವರು, ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಸಾಕು ಬೆಕ್ಕು 'ಸುಬ್ಬಿ'ಗೆ ಸೀಮಂತ ಸಂಭ್ರಮ: ಮಾರ್ಜಾಲವೇ ಇವರಿಗೆ ಮಗಳು!
Last Updated : Feb 3, 2023, 8:39 PM IST