ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಗುಡಿಸಲಿಗೆ ಬೆಂಕಿ... 6 ವರ್ಷದ ಪುಟ್ಟ ಕಂದಮ್ಮ ಪಾರು - ಗುಮ್ಮನಹಳ್ಳಿ ಭೋವಿ ಕಾಲೊನಿ
🎬 Watch Now: Feature Video
Published : Nov 2, 2023, 9:38 PM IST
|Updated : Nov 3, 2023, 5:19 PM IST
ಚಿಕ್ಕಮಗಳೂರು: ಜಿಲ್ಲೆಯ, ಕಡೂರು ತಾಲೂಕಿನ ಅಂತರ ಘಟ್ಟೆಯ ಗುಮ್ಮನಹಳ್ಳಿ ಭೋವಿ ಕಾಲೊನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದ 6 ವರ್ಷದ ಮಗುವೊಂದು ಬೆಂಕಿಯಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದೆ. ಗುಮ್ಮನಹಳ್ಳಿ ಶಶಿ ಮತ್ತು ಗೀತಾ ಕಲ್ಲೇಶ್, ಹಾಗೂ ಪಕ್ಕದ ಹನುಮಂತ ಎಂಬುವರ ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಗ್ರಾಮದಲ್ಲಿ ಸಾವು ಸಂಭವಿಸಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಇಡೀ ಗ್ರಾಮಸ್ಥರು ತೆರಳಿದ್ದರು. ಶವವನ್ನು ಸಮಾಧಿ ಮಾಡುವಾಗ ಇದ್ದಕ್ಕಿದ್ದಂತೆ ಗುಡಿಸಲಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಅಂತ್ಯ ಸಂಸ್ಕಾರವನ್ನು ಅರ್ಧಕ್ಕೆ ಬಿಟ್ಟ ಗ್ರಾಮಸ್ಥರು ಬೆಂಕಿ ನಂದಿಸಲು ಓಡಿ ಬಂದಿದ್ದಾರೆ. ಶಶಿ ಎಂಬುವವರ ಮನೆಯಲ್ಲಿ 6 ವರ್ಷದ ಮಗುವೊಂದು ಮಲಗಿಕೊಂಡಿತ್ತು. ಮಗುವನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಪಕ್ಕದ ಮನೆಗೂ ಬೆಂಕಿ ಹರಡಿ ಕೊಂಡಿದೆ. ಅಗ್ನಿ ಶಾಮಕ ದಳ ಆಗಮಿಸುವಷ್ಟರಲ್ಲಿ ಎರಡು ಮನೆಗಳು ಅಗ್ನಿಯ ಜ್ವಾಲೆಗೆ ಸಂಪೂರ್ಣ ಭಸ್ಮವಾಗಿದೆ. ಅಂತರಘಟ್ಟೆ ಉಪ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ, ದೂರು ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ತುಮಕೂರು... ಹಳೆಯ ವಸ್ತು ತುಂಬಿದ್ದ ಕೊಠಡಿಗೆ ಬೆಂಕಿ : ಓರ್ವ ಸಜೀವ ದಹನ