ಕೊಡಗು: ಮನೆ ಮುಂದೆ ಬಂದು ಕಾಡಾನೆಗಳ ದಾಂಧಲೆ - ವಿಡಿಯೋ ನೋಡಿ
🎬 Watch Now: Feature Video
ಕೊಡಗು : ಮಂಜಿನ ನಗರಿ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ತೋಟಗಳಲ್ಲಿ ಬೀಡು ಬಿಟ್ಟು ಕಾಫಿ ಬೆಳೆಗಳನ್ನು ನಾಶಮಾಡುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಮನೆ ಮುಂದೆ ದಾಂಧಲೆ ಮಾಡಿವೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳ್ಳಿ ಗ್ರಾಮದ ಡಿಎಚ್ಎಸ್ ಮಿಲ್ ಆವರಣಕ್ಕೆ ಬಂದು ಮನೆಯೊಂದರ ಮುಂದೆ ಇಟ್ಟಿದ್ದ ಗಿಡಗಳ ಪಾಟ್ಗಳನ್ನು ಸೊಂಡಿಲಿನಲ್ಲಿ ಎತ್ತಿ, ಕಾಲಿನಿಂದ ತುಳಿದು ನಾಶ ಮಾಡಿವೆ.
ಈ ವೇಳೆ, ಮನೆಯೊಳಗೆ ಇದ್ದವರು ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿವೆ. ಕಾಡಿನಿಂದ ಆಹಾರ ಅರಸಿ ಬಂದಿರುವ ಕಾಡಾನೆಗಳು ಕಾಡಿಗೆ ಹೋಗದೇ ಗ್ರಾಮದ ಭದ್ರಕಾಳಿ ದೇವಸ್ಥಾನದ ಸಮೀಪದಲ್ಲಿ ವಾಸ್ತವ್ಯ ಹೂಡಿವೆ.
ಮೂರು ಆನೆಗಳು ಒಂದು ಮರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಟ ನಡೆಸುತ್ತಿರುವ ಕಾಡಾನೆಗಳು ಜನರಲ್ಲಿ ಭಯ ಹುಟ್ಟಿಸಿವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO