17 ದಿನಗಳ ಬಳಿಕ ಕಾರ್ಮಿಕರು ಸುರಂಗದಿಂದ ಒಬ್ಬೊಬ್ಬರಾಗಿ ಹೊರಬಂದ ದೃಶ್ಯ- ನೋಡಿ
🎬 Watch Now: Feature Video
Published : Nov 29, 2023, 9:32 AM IST
ಉತ್ತರಾಖಂಡ: ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿದು ಸಂಕಷ್ಟದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ಬಳಿಕ ಮಂಗಳವಾರ ರಾತ್ರಿ ಸುರಕ್ಷಿತವಾಗಿ ಹೊರಬಂದರು. ಈ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ದುರಂತವೊಂದು ಸುಖಾಂತ್ಯ ಕಂಡಿತು. ರಕ್ಷಣಾ ಪೈಪ್‌ನಿಂದ ಹೊರಬಂದ ಬಳಿಕ ಕೆಲಸಗಾರರೊಬ್ಬರು ಖುಷಿಯಿಂದ ಥಮ್ಸ್ ಅಪ್ ಮಾಡಿದರು. ಕಾರ್ಮಿಕರು ಒಬ್ಬೊಬ್ಬರಾಗಿ ಪೈಪ್‌ನಿಂದ ಹೊರಬರುವ ದೃಶ್ಯ ಇಲ್ಲಿದೆ.
ಚಾರ್ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಸಂಭವಿಸಿತ್ತು. ಪರಿಣಾಮ ಸುರಂಗದೊಳಗೆ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಅಲ್ಲಿಯೇ ಸಿಕ್ಕಿಬಿದ್ದಿದ್ದರು. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಈ ಮಧ್ಯೆ ಅನೇಕ ಸಲ ಕೊರೆಯುವ ಯಂತ್ರಗಳು ಕೆಟ್ಟು ನಿಂತಿದ್ದವು. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಸಣ್ಣ ಪೈಪ್‌ಗಳ ಮೂಲಕ ಆಮ್ಲಜನಕ, ವಿದ್ಯುತ್ ಸಂಪರ್ಕ ಮತ್ತು ಆಹಾರ ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು. ಈ ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಬಿಆರ್ಒ, ಎನ್ಹೆಚ್ಐಡಿಸಿಎಲ್ ಮತ್ತು ಐಟಿಬಿಪಿ ಸೇರಿದಂತೆ ಹಲವು ಏಜೆನ್ಸಿಗಳ ತಂಡಗಳು ಭಾಗಿಯಾಗಿದ್ದವು.
ಇದನ್ನೂ ಓದಿ: ಕತ್ತಲೆಯಿಂದ ಬೆಳಕಿನೆಡೆಗೆ : 41 ಕಾರ್ಮಿಕರ ಕುಟುಂಬ ನಿರಾಳ ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ