ರಾಂಚಿಗೆ ಆಗಮಿಸಿದ ಯುಎಸ್​ ಮಹಿಳಾ ಹಾಕಿ ತಂಡ: ವಿಡಿಯೋ - ಪ್ಯಾರಿಸ್ ಒಲಿಂಪಿಕ್ಸ್‌

🎬 Watch Now: Feature Video

thumbnail

By ANI

Published : Jan 5, 2024, 3:06 PM IST

ರಾಂಚಿ: ಜನವರಿ 13ರಿಂದ 19ರವರೆಗೆ ಇಲ್ಲಿನ ಮಾರಂಗ್ ಗೊಮ್ಕೆ ಜೈಪಾಲ್ ಸಿಂಗ್ ಹಾಕಿ ಸ್ಟೇಡಿಯಂನಲ್ಲಿ ಎಫ್‌ಐಹೆಚ್ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಯುಎಸ್​ ಮಹಿಳಾ ಹಾಕಿ ತಂಡ ಗುರುವಾರ ರಾಂಚಿಗೆ ಆಗಮಿಸಿತು. 

ತಂಡವನ್ನು ಸಾಂಪ್ರದಾಯಿಕ ನೃತ್ಯ ಪ್ರದರ್ಶನದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆಟಗಾರ್ತಿಯರು ಕೂಡಾ ಕುಣಿದು ಖುಷಿಪಟ್ಟರು. ಯುಎಸ್ ತಂಡದ ನಾಯಕಿ ಅಮಂಡಾ ಗೋಲಿನಿ ಅವರು ಪಂದ್ಯಾವಳಿಗೆ ತಮ್ಮ ಸಿದ್ಧತೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. "ಪ್ಯಾರಿಸ್​ ಒಲಿಂಪಿಕ್ಸ್​ಗಾಗಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಪಂದ್ಯವಳಿಗಳಲ್ಲಿ ಗೆಲ್ಲಲು ಯೋಜನೆ ರೂಪಿಸಿಕೊಂಡು ತಂಡ ಇಲ್ಲಿಗೆ ಆಗಮಿಸಿದೆ" ಎಂದರು.  

2019ರ ಮಹಿಳಾ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಭಾರತದೆದುರು ಯುಎಸ್​ ಮಹಿಳಾ ಹಾಕಿ ತಂಡ ಸೋಲು ಕಂಡು ಒಲಿಂಪಿಕ್ಸ್‌ನಿಂದ ಹೊರಬಿದ್ದಿತ್ತು. ಒಲಿಂಪಿಕ್ಸ್​ ಅರ್ಹತಾ ಪಂದ್ಯವನ್ನು ಚೀನಾದಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಚೀನಾ ತಂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದ ಕಾರಣ ಪಂದ್ಯವನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ. 

ಇದನ್ನೂ ಓದಿ: ಕೇಪ್‌ ಟೌನ್‌ನಲ್ಲಿ ಐತಿಹಾಸಿಕ ಗೆಲುವು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಗ್ರಸ್ಥಾನಕ್ಕೇರಿದ ಭಾರತ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.