ಫ್ಯಾಷನ್ ಶೋನಲ್ಲಿ ತೃತೀಯ ಲಿಂಗಿಗಳ ರ‍್ಯಾಂಪ್ ವಾಕ್ - ವಿಡಿಯೋ - ತೃತೀಯ ಲಿಂಗಿಗಳ ಫ್ಯಾಷನ್ ಶೋ
🎬 Watch Now: Feature Video
Published : Sep 30, 2023, 10:28 PM IST
ಮೈಸೂರು: ಫ್ಯಾಷನ್ ಶೋನಲ್ಲಿ ಮಾಡೆಲ್ಗಳು ರ‍್ಯಾಂಪ್ ವಾಕ್ ಮಾಡುವುದನ್ನು ನೋಡಿದ್ದೇವೆ. ಆದರೆ, ಮೈಸೂರಿನಲ್ಲಿ ತೃತೀಯ ಲಿಂಗಿಗಳು ರ‍್ಯಾಂಪ್ ವಾಕ್ ಮಾಡಿ ಗಮನ ಸೆಳೆದಿದ್ದಾರೆ. ನಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಮಾಡೆಲ್ಗಳಂತೆ ಸ್ಟೈಲಿಶ್ ಡ್ರೆಸ್ ಧರಿಸಿ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ತೃತೀಯ ಲಿಂಗಿಗಳ ಫ್ಯಾಷನ್ ಶೋನಲ್ಲಿ 13 ತೃತೀಯ ಲಿಂಗಿಗಳು ಮಾಡೆಲ್ ರೀತಿಯಲ್ಲೇ ರ‍್ಯಾಂಪ್ ವಾಕ್ ಮಾಡಿದರು. ಇನ್ನರ್ ವಿಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ (INNER WILL CLUB OF MYSORE GOLD) ಈ ಫ್ಯಾಷನ್ ಶೋ ಆಯೋಜನೆ ಮಾಡಿತ್ತು. ತೃತೀಯ ಲಿಂಗಿಗಳು ವಿಶಿಷ್ಟ ರೀತಿಯಲ್ಲಿ ಬಟ್ಟೆ ಧರಿಸಿ ಮಾಡೆಲ್ಗಳನ್ನು ಮೀರಿಸುವಂತೆ ರ‍್ಯಾಂಪ್ ವಾಕ್ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಫ್ಯಾಷನ್ ಶೋಗೆ ಬೇರೆ ಬೇರೆ ಕಡೆಯಿಂದ ತೃತೀಯ ಲಿಂಗಿಗಳು ಆಗಮಿಸಿದ್ದರು. ಎಲ್ಲರೂ ತಮ್ಮ ರ‍್ಯಾಂಪ್ ವಾಕ್ನಿಂದ ಮನರಂಜನೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವಕ-ಯುವತಿಯರ Ramp Walk : ನೋಡುಗರ ಮನ ಗೆದ್ದ ಫ್ಯಾಷನ್ ಶೋ