ಆನೇಕಲ್: ಯುವತಿಯ ಕೈ, ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಕಳ್ಳರು - ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ
🎬 Watch Now: Feature Video
ಆನೇಕಲ್: ಹಾಡಹಗಲೇ ಮನೆಗೆ ನುಗ್ಗಿ ಒಬ್ಬಂಟಿಯಾಗಿದ್ದ ಯುವತಿಯ ಕೈ ಕಾಲು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮಿ ಟಾಕೀಸ್ ರಸ್ತೆಯಲ್ಲಿ ನಡೆದಿದೆ. ಲಕ್ಷ್ಮಿ ನಗರದಲ್ಲಿ ವಾಸವಾಗಿರು ಭಾಗ್ಯಲಕ್ಷ್ಮಿ ಎಂಬುವವರ ಮನೆ ಮುಂದೆ ಮಾಸ್ಕ್ ಧರಿಸಿಕೊಂಡು ಬೈಕ್ ನಲ್ಲಿ ಬಂದಿದ್ದ ಮೂವರು ಖದೀಮರು ಎರಡು ಮೂರು ಬಾರಿ ಸಂಚರಿಸಿದ್ದಾರೆ. ನಂತರ ಮನೆಯಲ್ಲಿ ಯುವತಿ ಒಬ್ಬಂಟಿಯಾಗಿರುವುದನ್ನು ಗಮನಿಸಿ ಮನೆ ಒಳಗೆ ನುಗ್ಗಿರುವ ಖದೀಮರು, ಯುವತಿಯ ಕೈ ಕಾಲು ಕಟ್ಟಿಹಾಕಿ ಬಾತ್ ರೂಂ ನಲ್ಲಿ ಇರಿಸಿ, ಬಳಿಕ ರೂಮ್ ಒಳಗೆ ಬೀರುವಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಖದೀಮರು ಕಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಹಾಡಹಗಲೇ ದರೋಡೆ ನಡೆದಿರುವ ಹಿನ್ನೆಲೆ ಆನೇಕಲ್ ಜನತೆ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಮಂಗಳೂರು ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಕೊಲೆ: ಕೇರಳದಲ್ಲಿ ಆರೋಪಿ ಸೆರೆ