ಬಿಸಿಲ ತಾಪಕ್ಕೆ ಬಸವಳಿದ ಭಕ್ತರು: ನಂಜನಗೂಡು ದೇಗುಲದ ಮುಂಭಾಗದ ರಸ್ತೆಗಳು ಕೂಲ್ ಕೂಲ್ - ದೇವಸ್ಥಾನ ಮುಂಭಾಗ ನೀರು ಹಾಕಿಸಿ ರಸ್ತೆಗಳನ್ನು
🎬 Watch Now: Feature Video
ಮೈಸೂರು: ಜೂನ್ ತಿಂಗಳು ಆರಂಭವಾದರೂ ಮುಂಗಾರು ಮಳೆ ಚುರುಕುಗೊಂಡಿಲ್ಲ. ಬಿಸಿಲಿನ ತಾಪವೂ ಕೂಡ ಕಡಿಮೆಯಾಗುತ್ತಿಲ್ಲ. ದೇವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಬರಿಗಾಲಿನಲ್ಲಿ ಬಂದರೆ ಪಾದಗಳು ಪದ ಹಾಡುತ್ತವೆ. ಅಲ್ಲದೇ ಉರುಳುಸೇವೆ ಮಾಡುವವರ ಕಥೆ ಅಧೋಗತಿ.
ಹೌದು, ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ, ಮೊದಲ ವಾರ ಕಳೆಯುತ್ತಾ ಬರುತ್ತಿದ್ದರೂ ಮಳೆ ಆರಂಭವಾಗಿಲ್ಲ.
ಮಧ್ಯಾಹ್ನ ಮೂರು ಗಂಟೆಯಾದರೂ ಬಿಸಿಲಿನ ತಾಪ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಕ್ತರಿಗೆ ತೊಂದರೆಯಾಗಬಾರದು ಎಂದು ಆಡಳಿತ ಮಂಡಳಿಯಿಂದ ದೇವಸ್ಥಾನ ಮುಂಭಾಗ ನೀರು ಹಾಕಿಸಿ ರಸ್ತೆಗಳನ್ನು ತಂಪು ಮಾಡಲಾಗುತ್ತಿದೆ. ಐತಿಹಾಸಿಕ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಮಧ್ಯಾಹ್ನ 12ರಿಂದ 3ರವರಗೆ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಚಪ್ಪಲಿ ಇಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪಾದಗಳನ್ನು ನೆಲೆದ ಮೇಲೆ ಇರಿಸಲಾಗುವುದಿಲ್ಲ. ಅಲ್ಲದೇ, ಉರುಳುಸೇವೆ ಮಾಡುವ ಭಕ್ತರ ಕಥೆ ಹೇಳತೀರದಾಗಿದೆ.
ಭಕ್ತರ ಬಿಸಿಲಿನ ಬೇಗೆ ಬಸವಳಿಯುತ್ತಿರುವುದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿ, ಮಧ್ಯಾಹ್ನದ ಬಿಸಿಲಿನ ವೇಳೆಯಲ್ಲಿ ರಸ್ತೆಗಳನ್ನು ತಂಪಾಗಿಡಲು ನೀರು ಹಾಕಿಸುತ್ತಿದೆ. ಇದರಿಂದ ಭಕ್ತಾದಿಗಳಿಗಷ್ಟೇ ಅಲ್ಲದೇ ದೇವಸ್ಥಾನ ಮುಂಭಾಗ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಬಿಸಿಲಿನ ಶಾಖ ತಗ್ಗಿದಂತಾಗುತ್ತದೆ.
ಇದನ್ನೂ ಓದಿ: ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಪರಿಸರ ದಿನಾಚರಣೆ- ವಿಡಿಯೋ