ಕಳ್ಳತನ ಮಾಡಲು ಬಂದ ಖದೀಮ ನಿದ್ದೆಗೆ ಜಾರಿದ.. ಇದು ನಡೆದಿದ್ದೆಲ್ಲಿ ಗೊತ್ತೇ? - MKB Nagar Police Station Chennai
🎬 Watch Now: Feature Video
ಚೆನ್ನೈ (ತಮಿಳುನಾಡು): ವ್ಯಾಸರಪಾಡಿಯ ಶರ್ಮಾ ನಗರದಲ್ಲಿ ಬಳಿ ದೇವಸ್ಥಾನವೊಂದಕ್ಕೆ ಕಳ್ಳತನ ಮಾಡಲು ಬಂದ ಖದೀಮ ಬಾಗಿಲು ತೆರೆಯಲು ಆಗದೇ, ನಿದ್ದೆಗೆ ಜಾರಿದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚೆನ್ನೈನ ವ್ಯಾಸರ್ಪಾಡಿ ಶರ್ಮಾ ನಗರದಲ್ಲಿ 50 ವರ್ಷಗಳಷ್ಟು ಹಳೆಯದಾದ ವೆಟ್ರಿ ವಿನಯಗರ್ ದೇವಸ್ಥಾನವಿದೆ. ದೇವಸ್ಥಾನದ ಅರ್ಚಕರು ಎಂದಿನಂತೆ ನಿನ್ನೆ(ಫೆ.14) ಬೆಳಗ್ಗೆ ದೇವಸ್ಥಾನವನ್ನು ತೆರೆಯಲು ಬಂದಾಗ, ಪೆಟ್ಟಿಗೆಯೊಂದರ ಬಳಿ ಅರೆಬೆತ್ತಲೆ ಸ್ಥಿತಿಯಲ್ಲಿ ಖದೀಮ ನೆಲದ ಮೇಲೆ ಮಲಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಬಳಿಕ ದೇವಸ್ಥಾನದ ಅಧಿಕಾರಿಗಳು ಸ್ಥಳಕ್ಕೆ ಬಂದು ಖದೀಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಫೆ.13ರಂದು ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ವ್ಯಕ್ತಿ ಪೆಟ್ಟಿಯನ್ನು ಒಡೆದು ಚಿನ್ನಾಭರಣ ದೋಚಲು ಯತ್ನಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪಟ್ಟಿಯನ್ನು ಒಡೆಯಲು ಸಾಧ್ಯವಾಗದ ಕಾರಣ ಸಮೀಪದಲ್ಲೇ ಇನ್ನೊಂದು ಪೆಟ್ಟಿಯನ್ನು ತೆರೆದು ನೋಡಿದ್ದಾನೆ. ಅದರಲ್ಲಿ ಬಟ್ಟೆ ಮಾತ್ರ ಇದ್ದು, ಎಲ್ಲವನ್ನೂ ಕಿತ್ತಾಡಿ ಚಿನ್ನಾಭರಣಕ್ಕಾಗಿ ಹುಡುಕಾಡಿದ್ದಾನೆ, ಆದರೂ ಕಳ್ಳನಿಗೆ ಏನೂ ಸಿಗಲಿಲ್ಲ.
ಬಹಳ ಸಮಯದ ನಂತರ ಆ ವ್ಯಕ್ತಿ ಚಿನ್ನಾಭರಣವಿರುವ ಪೆಟ್ಟಿಗೆ ಒಡೆಯಲು ಯತ್ನಿಸಿದ್ದಾನೆ. ಸಾಧ್ಯವಾಗದ ಕಾರಣ ನಿಶ್ಯಕ್ತಿಯಿಂದ ಅಲ್ಲೇ ಮಲಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ನಂತರ ಕಳ್ಳನನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಚೆನ್ನೈನ ಎಂಕೆಬಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ.
ಇದನ್ನೂ ಓದಿ: ಶರದ್ ಪವಾರ್ ಆಪ್ತ ಉದ್ಯಮಿ ಅನಿರುದ್ ದೇಶಪಾಂಡೆ ಕಚೇರಿ ಮೇಲೆ ಐಟಿ ದಾಳಿ..