ನೆದರ್ಲೆಂಡ್ಸ್ ವಿರುದ್ಧ ಔಪಚಾರಿಕ ಕದನ: ಬೆಂಗಳೂರಿಗೆ ಬಂದಿಳಿದ ಟೀಮ್ ಇಂಡಿಯಾ - ETV Bharath Karnataka
🎬 Watch Now: Feature Video
Published : Nov 6, 2023, 10:10 PM IST
ಬೆಂಗಳೂರು: ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು 243 ರನ್ಗಳಿಂದ ಮಣಿಸಿದ ಟೀಮ್ ಇಂಡಿಯಾ ಬೆಂಗಳೂರಿಗೆ ಆಗಮಿಸಿದೆ. 2023ರ ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳಲ್ಲಿ 9ಕ್ಕೆ 8 ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಕೊನೆಯ ನೆದರ್ಲೆಂಡ್ಸ್ ವಿರುದ್ಧದ ಔಪಚಾರಿಕ ಮುಖಾಮುಖಿಯನ್ನು ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ರೋಹಿತ್ ಶರ್ಮಾ ಪಡೆ 8 ಪಂದ್ಯಗಳಲ್ಲಿನ ಗೆಲುವಿನಿಂದ ಮೊದಲ ತಂಡವಾಗಿ ಸೆಮೀಸ್ಗೆ ಪ್ರವೇಶ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ನಡೆದ ಇತರ ವಿಶ್ವಕಪ್ ಪಂದ್ಯಗಳು ದೊಡ್ಡ ಮೊತ್ತದ ರನ್ಗಳ ಹೊಳೆಗೆ ಕಾರಣವಾಗಿವೆ. ಫಾರ್ಮ್ನಲ್ಲಿರುವ ಟೀಮ್ ಇಂಡಿಯಾದಿಂದ ಕ್ರಿಕೆಟ್ ಶಿಶುಗಳ ವಿರುದ್ಧ ಭರ್ಜರಿ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ತುದಿಗಾಲಿನಲ್ಲಿದ್ದಾರೆ. ಆರ್ಸಿಬಿ ತಂಡಕ್ಕಾಗಿ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಈ ವರ್ಷ ವಿರಾಟ್ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಬೆಂಗಳೂರಿನ ಪಂದ್ಯದಲ್ಲೂ ಅವರಿಂದ ಇನ್ನೊಂದು ಬೃಹತ್ ಇನ್ನಿಂಗ್ಸ್ನ ನಿರೀಕ್ಷೆ ಇದೆ.
ವಿರಾಟ್ ಬೆಂಗಳೂರನ್ನು ತಮ್ಮ ಎರಡನೇ ತವರು ಮೈದಾನ ಎಂದು ಕರೆಯುತ್ತಾರೆ ಇಲ್ಲಿ ಅವರ 50ನೇ ಏಕದಿನ ಶತಕ ದಾಖಲಾಗುತ್ತಾ ಎಂಬುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ವಿರಾಟ್ ರೀತಿಯಲ್ಲೇ ಆರ್ಸಿಬಿ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಸಹ ತಂಡದಲ್ಲಿ ಆಡುತ್ತಿದ್ದು, ಇವರನ್ನು ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರಲಿದ್ದಾರೆ.
ಇದನ್ನೂ ಓದಿ: "ಸಚಿನ್ ದಾಖಲೆ ಸಮಮಾಡಲು ಲೇಸರ್ನಂತೆ ವಿರಾಟ್ ಫೋಕಸ್ ಹೊಂದಿದ್ದರು"- ಎಬಿಡಿ