ತಮಿಳುನಾಡಲ್ಲೂ ಆರ್ಸಿಬಿ ಫ್ಯಾನ್ಸ್: ಅಭಿಮಾನಿಗಳಿಂದ "ಈ ಸಲ ಕಪ್ ನಮ್ದೆ" ಎಂದು ದೇವರಿಗೆ ಹರಕೆ - ETV Bharath Kannada news
🎬 Watch Now: Feature Video
ಕೃಷ್ಣಗಿರಿ (ತವಿಳುನಾಡು): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರಖ್ಯಾತ ತಂಡ ಆರ್ಸಿಬಿ ಎಂದರೆ ತಪ್ಪಾಗಲಾರದು. ಬೆಂಗಳೂರು ತಂಡಕ್ಕೆ ವಿಶ್ವದಾದ್ಯಂತ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. ಪ್ರತೀ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ಫ್ಯಾನ್ಸ್ ಒಂದೇ ವಿಚಾರವನ್ನು ಗುನುಗುತ್ತಾರೆ, ಅದೇ ಇ ಸಲ ಕಪ್ ನಮ್ದೆ ಎಂದು ಐಪಿಎಲ್ನಿಂದ ನಿವೃತ್ತರಾಗಿರುವ ಎಬಿ ಡಿವಿಲಿಯರ್ಸ್ಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿತ್ತು. ಈ ವೇಳೆ ಡಿವಿಲಿಯರ್ಸ್ ಸಹ ಈ ಸಲ ಕಪ್ ನಮ್ದೆ ಎಂದು ಹೇಳಿದ್ದಾರೆ.
2008 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ 5 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಕಪ್ ಗೆದ್ದಿದೆ. ಆದರೆ ಆರ್ಸಿಬಿ ಫೈನಲ್ಸ್ ತಲುಪಿ ಸೋಲನುಭವಿಸಿದೆ. ಕಪ್ ಗೆಲ್ಲದಿದ್ದರೂ ಅಭಿಮಾನಿಗಳು ತಂಡವನ್ನು ಬಿಟ್ಟುಕೊಟ್ಟಿಲ್ಲ. ತಂಡವನ್ನು ಬೆಂಬಲಿಸುವುದನ್ನು ನಿಲ್ಲಿಸಿಲ್ಲ. ಪ್ರತೀ ವರ್ಷ ತಂಡಕ್ಕೆ ಕಪ್ ಬರಲಿ ಎಂದು ಹರಸುತ್ತಾರೆ. ಇದಕ್ಕಾಗಿ ಅಭಿಮಾನಿಗಳು ನಾನಾ ರೀತಿಯ ಹರಕೆ ಸೇವೆಗಳನ್ನು ದೇವರಿಗೆ ಸಲ್ಲಿಸಿದ್ದು ಉಂಟು.
ಈಗ, ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ತಮಿಳುನಾಡಿನ ಅಭಿಮಾನಿಗಳು ರಥೋತ್ಸವದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ರಥೋತ್ಸವದ ವೇಳೆ ಬಾಳೆಹಣ್ಣಿನಲ್ಲಿ ಬೇಡಿಕೆಗಳನ್ನು ಬರೆದು ರಥಕ್ಕೆ ಎಸೆಯುತ್ತಾರೆ. ಇದೊಂದು ರೀತಿಯಲ್ಲಿ ದೇವರಿಗೆ ಬೇಡಿಕೆ ಇಡುವ ಕ್ರಮವಾಗಿದೆ. ತಮಿಳುನಾಡಿನ ಆರ್ಸಿಬಿಯನ್ಸ್ ಉತ್ಸವದ ವೇಳೆ ಬಾಳೆಹಣ್ಣಿನ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆದು ರಥಕ್ಕೆ ಎಸೆದಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಕ್ಕದ ಗೊಪ್ಪಚಂದ್ರಂ ಗ್ರಾಮದ ವೆಂಕಟರಮಣಸಾಮಿ ದೇವಸ್ಥಾನದ ರಥೋತ್ಸವದ ವೇಳೆ ಬೆಂಗಳೂರು ತಂಡದ ಅಭಿಮಾನಿಗಳು "ಆರ್ಸಿಬಿ ಈ ಸಲ ಕಪ್ ನಮ್ದೆ" ಎಂದು ಬರೆದು ದೇವರಿಗೆ ಸಮರ್ಪಿಸಿದ್ದಾರೆ. 16ನೇ ಐಪಿಎಲ್ ಆವೃತ್ತಿ ಮಾರ್ಚ್ 31ರಿಂದ ಆರಂಭವಾಗಿದ್ದು, ಆರ್ಸಿಬಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಏಪ್ರಿಲ್ 6ರಂದು ಕೋಲ್ಕತ್ತಾ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: IPL 2023: ಅಂದು ಟೀಕೆ ಇಂದು ಪ್ರಶಂಸೆ.. ಆರ್ಸಿಬಿ ಪರ 50ನೇ ವಿಕೆಟ್ ಪಡೆದ ಸಿರಾಜ್