ಚಲಿಸುತ್ತಿದ್ದ ರೈಲಿನಿಂದ ಯುವಕನನ್ನು ತಳ್ಳಿ ಕೊಲೆ ಮಾಡಿದ ಸಹಪ್ರಯಾಣಿಕ..! - A young man was pushed to death by a moving train
🎬 Watch Now: Feature Video
ಕೋಝಿಕ್ಕೋಡ್ (ಕೇರಳ): ಸಹ ಪ್ರಯಾಣಿಕನೊಬ್ಬ ಓಡುತ್ತಿರುವ ರೈಲಿನಿಂದ ಯುವಕನನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಶಿವಗಂಗಾ ಮೂಲದ ಸೋನೈ ಮುತ್ತು (48) ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ಈ ದುರ್ಘಟನೆ ನಡೆದಿದೆ. ಯುವಕನ ಮೇಲೆ ಹಲ್ಲೆ ನಡೆಸಿ ರೈಲಿನಿಂದ ಹೊರಕ್ಕೆ ತಳ್ಳಿರುವ ಮೊಬೈಲ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಚುರುಕುಗೊಂಡ ಪೊಲೀಸರ ತನಿಖೆ: ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಈತ ವಲಸೆ ಕಾರ್ಮಿಕ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೈಲು ಪ್ರಯಾಣದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಸೋನೈ ಮುತ್ತು ಯುವಕರನ್ನು ಹೊರಗೆ ತಳ್ಳಿದ್ದಾನೆ. ಇತರ ಪ್ರಯಾಣಿಕರು ಮಾಹಿತಿ ನೀಡಿದ ನಂತರ ರೈಲು ಕೋಯಿಕ್ಕೋಡ್ ತಲುಪಿದಾಗ ರೈಲ್ವೆ ಪೊಲೀಸರು ಸೋನೈ ಮುತ್ತುನನ್ನು ವಶಕ್ಕೆ ತೆಗೆದುಕೊಂಡರು.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಯುವಕನ ಮೇಲೆ ಏಕೆ ಹಲ್ಲೆ ನಡೆಸಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೊಲೆಯಾದ ಯುವಕನ ಪರಿಚಯವೇ ಇಲ್ಲ ಎಂದು ಸೋನೈ ಮುತ್ತು ಹೇಳಿಕೆ ನೀಡಿದ್ದಾನೆ. ಇಬ್ಬರೂ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕನ ಶವವನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ತಿರುಪುರ್ ಬಳಿ ರೈಲಿಗೆ ಸಿಲುಕಿ ಬಿಹಾರದ ಮೂಲದ ಕಾರ್ಮಿಕ ಸಾವು