ದೆಹಲಿ ಮದ್ಯ ಹಗರಣದ ಕುರಿತು ಸುಕೇಶ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ

🎬 Watch Now: Feature Video

thumbnail

By

Published : Mar 10, 2023, 4:19 PM IST

ನವದೆಹಲಿ: 200 ಕೋಟಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿಚಾರಣೆಗೆ ಹಾಜರಾದರು. ವಿಚಾರಣೆ ಬಳಿಕ ಹೊರಬಂದ ಸುಕೇಶ್ ಅವರು, ಮದ್ಯದ ಹಗರಣ ಪ್ರಕರಣದಲ್ಲಿ ಸಿಸೋಡಿಯಾ ಹಾಗೂ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಹಗರಣದಲ್ಲಿ ಇನ್ನೂ ಹಲವು ದೊಡ್ಡವರು ಸಿಕ್ಕಿ ಬೀಳಲಿದ್ದಾರೆ. ಭವಿಷ್ಯದಲ್ಲಿ ಇನ್ನೂ ಅನೇಕ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ಹೆಸರನ್ನೂ ಕೂಡಾ ಬಹಿರಂಗಪಡಿಸುವುದಾಗಿ ಅವರು ಹೇಳಿದರು.

ಶೀಘ್ರದಲ್ಲೇ ಅರವಿಂದ್ ಕೇಜ್ರಿವಾಲ್ ಬಂಧನ ಆಗಲಿವೆ: ಈಗ ಅಬಕಾರಿ ನೀತಿ ವಿಚಾರದಲ್ಲಿ ಮುಂದಿನ ಸರತಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರದ್ದು ಇದೆ. ತನಿಖಾ ಸಂಸ್ಥೆಗಳು ಶೀಘ್ರದಲ್ಲೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಿವೆ. ಈ ವಿಚಾರದಲ್ಲಿ ಇಡೀ ಆಮ್ ಆದ್ಮಿ ಪಕ್ಷ ಭಾಗಿಯಾಗಿದೆ ಎಂದು ಸುಕೇಶ್ ಹೇಳಿದರು. ತನಿಖಾ ಸಂಸ್ಥೆಗಳ ಮುಂದೆ ಇನ್ನೂ ಕೆಲವು ಪ್ರಮುಖರ ಹೆಸರುಗಳು ಹೊರಗೆ ಬರಲಿವೆ ಎಂದು ಸುಕೇಶ್ ಹೇಳಿದ್ದಾರೆ. ಶೀಘ್ರದಲ್ಲೇ ಪತ್ರ ಬರೆದು ಆ ಹೆಸರುಗಳನ್ನು ಬಹಿರಂಗಪಡಿಸಲಿದ್ದೇನೆ ಎಂದರು.

ಇದನ್ನೂ ಓದಿ: ಬುಲ್ಡೋಜರ್‌ ಚಲಾಯಿಸಿ ಅತ್ಯಾಚಾರ ಆರೋಪಿಯ ಮನೆ ಧ್ವಂಸಗೊಳಿಸಿದ ಮಹಿಳಾ ಪೊಲೀಸರು!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.