ಚಾಮರಾಜನಗರ : ಮತ್ತೆ ಆನೆ ದಾದಾಗಿರಿ ಪ್ರಾರಂಭ, ಲಾರಿ ತಡೆಗಟ್ಟಿ ಕಬ್ಬು ವಸೂಲಿ!! - ಕಬ್ಬು ಹೊತ್ತು ಹೊಯ್ಯುತ್ತಿರುವ ಲಾರಿ
🎬 Watch Now: Feature Video
ಚಲಿಸುತ್ತಿದ್ದ ಲಾರಿಯನ್ನು ತಡೆಗಟ್ಟಿ ಆನೆಯೊಂದು ಕಬ್ಬು ತಿನ್ನುತ್ತಿರುವ ಘಟನೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಪುಣಜನೂರು ಬಳಿ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಅಸನೂರು, ಕಾರೆಪಾಳ, ಪುಣಜನೂರು ಸುತ್ತಮುತ್ತ ಆನೆಗಳು ಕಬ್ಬು ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿವೆ. ಈಗ ಮತ್ತೆ ಆರಂಭಗೊಂಡಿದ್ದು, ಆನೆಯೊಂದು ರಾಷ್ಟ್ರೀಯ ಹೆದ್ದಾರಿ ಸಮೀಪವೇ ಬೀಡುಬಿಟ್ಟಿದೆ. ಗುರುವಾರ ಕಬ್ಬು ತುಂಬಿದ ಲಾರಿ ಅಡ್ಡಗಟ್ಟಿ ಕಬ್ಬು ತಿನ್ನುತ್ತಿರುವ ದೃಶ್ಯವನ್ನು ಬಸ್ ಚಾಲಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
Last Updated : Feb 3, 2023, 8:23 PM IST