Cricketer Died: ಪಂದ್ಯ ಆಡುವಾಗಲೇ ಕ್ರಿಕೆಟಗರೊಬ್ಬರು ಸಾವನ್ನಪ್ಪಿರುವ ಘಟನೆ ಘಟನೆ ಜೈಪುರದಲ್ಲಿ ನಡೆದಿದೆ. ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಹಠಾತ್ ಆಗಿ ಕುಸಿದು ಬಿದ್ದ ಆಟಗಾರ ಕೊನೆಯುಸಿರೆಳೆದಿದ್ದಾರೆ.
ಮಾಜಿ ರಣಜಿ ಆಟಗಾರ ಆಗಿದ್ದ ಯಶ್ ಗೌರ್ ಜೈಪುರದ ಕಲ್ವಾಡ್ ರಸ್ತೆಯ ವಿನಾಯಕ್ ಕ್ರಿಕೆಟ್ ಮೈದಾನದಲ್ಲಿ ಕೊನೆಯುಸಿರೆಳೆದಿದ್ದಾರೆ. ವಾಸ್ತವವಾಗಿ, 58 ವರ್ಷದ ಯಶ್ ಅವರು ಜೈಪುರದ ವೆಟರನ್ಸ್ ಡಬಲ್ ವಿಕೆಟ್ ಟೂರ್ನಮೆಂಟ್‌ನ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಅವರು ಕೂಡಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಅಲ್ಲಿದ್ದ ಸಹಾ ಆಟಗಾರರ ಪ್ರಕಾರ, ಯಶ್ ಗೌರ್ ಅವರು ಮೈದಾನದಲ್ಲಿ ಸ್ಕ್ವೇರ್ ಲೆಗ್ನತ್ತ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ನಂತರೆ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣೆವೇ ಅವರನ್ನು ಆಸ್ಪತ್ರಗೆ ಸಾಗಿಸಿಲಾಯಿತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಹೇಳಿದ್ದಾರೆ.
ಮಾಜಿ ರಣಜಿ ಪ್ಲೇಯರ್: ಯಶ್ ಗೌರ್ 80ರ ದಶಕದಲ್ಲಿ ರಾಜಸ್ಥಾನ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಆಡುವ ಹನ್ನೊಂದರ ತಂಡದಲ್ಲಿ ಸ್ಥಾನಸಿಕ್ಕಿರಲಿಲ್ಲ. ಆದರೂ ಅವರ ಕ್ರಿಕೆಟ್ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿರಲಿಲ್ಲ. ಸ್ಥಳೀಯ ಕ್ರಿಕೆಟ್‌ನಲ್ಲಿ ಭಾಗವಹಿಸಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಆದರೇ ಅವರ ಹಠಾತ್ ನಿಧನದಿಂದಾಗಿ ಜೈಪುರ ಕ್ರಿಕೆಟ್ ಲೋಕದಲ್ಲಿ ಶೋಕ ಆವರಿಸಿದೆ.
ಒಂದೇ ವಾರದಲ್ಲಿ ಇಬ್ಬರು ಕ್ರಿಕೆಟರ್ ನಿಧನ
ಕಳೆದು ಸೋಮವಾರದಂದು ರಣಜಿ ಆಟಗಾರವೊಬ್ಬರು ಸಾವನ್ನಪ್ಪಿದ್ದರು. ವಿಜಯ್ ಹಜಾರೆ, ರಣಜಿ ಟ್ರೋಫಿಯಂತಹ ಪ್ರತಿಷ್ಠತ ಟೂರ್ನಿಗಳಲ್ಲಿ ಭಾಗಿಯಾಗಿ ತಂಡವನ್ನು ಗೆಲ್ಲಿಸಿದ್ದ ಬ್ಯಾಟರ್ ಹಠಾತ್ ನಿಧನ ಹೊಂದಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿತು. ಬಂಗಾಳದ ರಣಜಿ ಟ್ರೋಫಿಯ ಮಾಜಿ ಆಟಗಾರನಾಗಿದ್ದ ಶುಭೋಜಿತ್ ಬ್ಯಾನರ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
2014ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಬಂಗಾಳಕ್ಕೆ ಪಾದಾರ್ಪಣೆ ಮಾಡಿದ್ದ ಶುಭೋಜಿತ್, ಮೂರು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದರು. ಸದ್ಯ ಅವರು ಸ್ಥಳೀಯ ಕ್ರಿಕೆಟ್ಗಳಲ್ಲಿ ಖ್ಯಾತಿ ಪಡೆದಿದ್ದರು. ಶುಭೋಜಿತ್ ಅವರು ಬೆಳಗಿನ ಉಪಾಹಾರ ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಕೆಲ ಗಂಟೆಗಳೂ ಕಳೆದರೂ ತಮ್ಮ ಕೋಣೆಯಿಂದ ಹೊರ ಬರದೆ ಇದ್ದುದಕ್ಕೆ, ಆತಂಕಗೊಂಡ ಪೋಷಕರು ಕೋಣೆ ಪ್ರವೇಶಿಸಿ ನೋಡಿದಾಗ ಶುಭೋಜಿತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ವೈದ್ಯರನ್ನು ಕರೆಯಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ 39 ವರ್ಷದ ಶುಭೋಜಿತ್ ಸಾವನ್ನಪ್ಪಿದ್ದರು. ಈ ಘಟನೆ ನಡೆದು 4 ದಿನಗಳಲ್ಲೆ ಮತ್ತೊಬ್ಬ ಆಟಗಾರ ಸಾವನ್ನಪ್ಪಿದ್ದು ಕ್ರೀಡಾಲೋಕಕ್ಕೆ ಭಾರಿ ಆಘಾಟವನ್ನುಂಟು ಮಾಡಿದೆ.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಸ್ಟೀವ್ ಸ್ಮಿತ್: ಜೋ ರೂಟ್ ರೇಕಾರ್ಡ್ ಬ್ರೇಕ್!