ETV Bharat / bharat

ಬೆಳ್ಳಂಬೆಳಗ್ಗೆ ಭಾರಿ ಮಳೆ; ಮುಂದುವರಿದ ಕಳಪೆ ವಾತಾವರಣ, ಮರಗಳು ನೆಲಕ್ಕುರುಳಿ ಭಾರಿ ಟ್ರಾಫಿಕ್​ ಜಾಮ್​ - DELHI WITNESS HEAVY RAINFALL

ದೆಹಲಿ ಎನ್​​ಸಿಆರ್​​ನಾದ್ಯಂತ ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Delhi continues to witness heavy rainfall
ಬೆಳ್ಳಂಬೆಳಗ್ಗೆ ಭಾರಿ ಮಳೆ; ಮುಂದುವರಿದ ಕಳಪೆ ವಾತಾವರಣ, ಮರಗಳು ನೆಲಕ್ಕುರಳಿ ಭಾರಿ ಟ್ರಾಫಿಕ್​ ಜಾಮ್​ (IANS)
author img

By ANI

Published : 15 hours ago

ನವದೆಹಲಿ: ಶನಿವಾರ ಬೆಳಗ್ಗೆಯಿಂದ ದೆಹಲಿಯ ಕೆಲವು ಭಾಗಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಭಾರಿ ಮಳೆ ಮತ್ತು ರಭಸದ ಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿವೆ.

ಸೆಕ್ಟರ್-9, ಆರ್‌ಕೆ ಪುರಂನಲ್ಲಿ, ರಸ್ತೆಯ ಒಂದು ಭಾಗ ಧ್ವಂಸಗೊಂಡಿದ್ದು, ಒಂದು ಮೋಟಾರ್‌ ಸೈಕಲ್ ಮತ್ತು ಕಾರು ಪೀಡಿತ ಪ್ರದೇಶಕ್ಕೆ ಬಿದ್ದಿದೆ. ಭಾರತೀಯ ಹವಾಮಾನ ಇಲಾಖೆ IMD ದೆಹಲಿ ಮತ್ತು ಎನ್‌ಸಿಆರ್‌ನಾದ್ಯಂತ ಹಲವಾರು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಇಂದು ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಇದು ಪಾಲಂ, ಸಫ್ದರ್‌ಜಂಗ್, ಲೋಡಿ ರಸ್ತೆ, ಐಜಿಐ ವಿಮಾನ ನಿಲ್ದಾಣ, ಮೆಹ್ರೌಲಿ, ಛತ್ತರ್‌ಪುರ, ಅಯನಗರ್, ದೇರಮಂಡಿ, ಗುರುಗ್ರಾಮ್, ಫರಿದಾಬಾದ್ ಮತ್ತು ಮನೇಸರ್‌ನಂತಹ ಪ್ರದೇಶಗಳನ್ನು ಒಳಗೊಂಡಿದೆ. ನೋಯ್ಡಾ ಮತ್ತು ಮನೇಸರ್​ ನಲ್ಲಿ ಸಹ ಸಾಧಾರಣದಿಂದ ಭಾರೀ ಮಳೆ ಮತ್ತು ಮಿಂಚುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಗುಡುಗು ಸಹಿತ ಮಳೆ ಸಾಧ್ಯತೆ: ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಲಘುವಾಗಿ ಸಾಧಾರಣ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಮುನ್ಸೂಚನೆ ನೀಡಿದೆ. ಇದರಲ್ಲಿ ಯಮುನಾನಗರ, ಝಜ್ಜರ್, ಫರುಖ್‌ನಗರ, ಮತ್ತು ಹರಿಯಾಣದ ಹೊಡಲ್ ಸೇರಿವೆ. ಉತ್ತರ ಪ್ರದೇಶದ ಸಹರಾನ್‌ಪುರ, ಗಂಗೋಹ್, ದಿಯೋಬಂದ್, ಮುಜಾಫರ್‌ನಗರ, ಸಕೋಟಿ ತಾಂಡಾ, ಬರೌತ್, ದೌರಾಲಾ, ಬಾಗ್‌ಪತ್, ಮೀರತ್, ಮೋದಿನಗರ, ಕಿಥೋರ್ ಮತ್ತು ನಂದಗಾಂವ್ ಮತ್ತು ರಾಜಸ್ಥಾನದಲ್ಲಿ ತಿಜಾರಾ ಮತ್ತು ಅಲ್ವಾರ್ ಗಳಲ್ಲಿ ಮಳೆ ಆಗಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಏತನ್ಮಧ್ಯೆ, ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಮಥುರಾ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ಶುಕ್ರವಾರ ಮುಂಜಾನೆಯಿಂದ ನಿರಂತರ ಮಳೆಯಿಂದಾಗಿ ದೆಹಲಿಯ ವಿವಿಧ ಭಾಗಗಳಲ್ಲಿ ವ್ಯಾಪಕವಾದ ಮಳೆಯಾಗಿದ್ದರಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಪರಿಣಾಮ ತೀವ್ರ ಸಂಚಾರ ಅಸ್ತವ್ಯಸ್ತವಾಗಿತ್ತು. ಜಲಪ್ರವಾಹದಿಂದಾಗಿ ಗಮನಾರ್ಹ ನಗರದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಶನಿವಾರವಾದ ಇಂದು ನವದೆಹಲಿಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಡಿಸೆಂಬರ್​​ ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚಿನ ಮಳೆ: ಹವಾಮಾನ ಇಲಾಖೆಯ ಪ್ರಕಾರ ದೆಹಲಿಯು ಶುಕ್ರವಾರ 15 ವರ್ಷಗಳಲ್ಲಿ ಅದು ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಗುರುವಾರ ಮುಂಜಾನೆ ಆರಂಭವಾದ ಭಾರಿ ಮಳೆ ದಿನವಿಡೀ ಸುರಿಯಿತು. ಮಳೆಯು ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ತಂದಿದೆ. ಆದರೂ ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ' ವಿಭಾಗದಲ್ಲೇ ಮುಂದುವರೆದಿದೆ.

ಶುಕ್ರವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ AQI 355 ದಾಖಲಾಗಿದೆ.

ಇದನ್ನು ಓದಿ: ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ನಾಳೆ ಮನಮೋಹನ್​ ಸಿಂಗ್ ಪಾರ್ಥಿವ ಶರೀರದ ಅಂತ್ಯಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.