ETV Bharat / state

ಮನಮೋಹನ್‌ ಸಿಂಗ್ ಅಗಲಿಕೆ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ನಷ್ಟ: ಸಿಎಂ ಸಿದ್ದರಾಮಯ್ಯ - TRIBUTES TO MANMOHAN SINGH

ಮಾಜಿ ಪ್ರಧಾನಿ ದಿ.ಡಾ.ಮನಮೋಹನ್​ ಸಿಂಗ್​ ಅವರಿಗೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Tributes paid to Manmohan Singh at Gandhi Bharat program stage in Belagavi
ಗಾಂಧಿ ಭಾರತ ಕಾರ್ಯಕ್ರಮ ವೇದಿಕೆಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಅವರಿಗೆ ಶ್ರದ್ಧಾಂಜಲಿ (ETV Bharat)
author img

By ETV Bharat Karnataka Team

Published : 17 hours ago

Updated : 15 hours ago

ಬೆಳಗಾವಿ: "ಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತು ಮತ್ತು ಆರ್ಥಿಕ ಕ್ಷೇತ್ರಕ್ಕಾದ ದೊಡ್ಡ ನಷ್ಟ" ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು.

ಗಾಂಧಿ‌ ಭಾರತ ಕಾರ್ಯಕ್ರಮ ನಡೆಯಬೇಕಿದ್ದ ಬೆಳಗಾವಿ ಸಿಪಿಇಡ್ ಮೈದಾನದ ಬೃಹತ್ ವೇದಿಕೆಯಲ್ಲಿ ಡಾ.ಸಿಂಗ್ ಅವರಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಒಂದು ನಿಮಿಷ ಮೌನ ಆಚರಿಸಿ, ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಗಣ್ಯರು ಗೌರವ ಸಲ್ಲಿಸಿದರು.

ಗಾಂಧಿ ಭಾರತ ಕಾರ್ಯಕ್ರಮ ವೇದಿಕೆಯಲ್ಲಿ ದಿ. ಡಾ.ಮನಮೋಹನ್​ ಸಿಂಗ್​ ಅವರಿಗೆ ಶ್ರದ್ಧಾಂಜಲಿ (ETV Bharat)

ಇದಕ್ಕೂ ಮುನ್ನ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಅನೇಕ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ನ್ಯಾಯ ಕೊಡಿಸಿದ್ದರು. ರಾಷ್ಟ್ರದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದರು. ಆರ್‌ಬಿಐ ಗವರ್ನರ್‌ ಆಗಿ, ನರಸಿಂಹರಾವ್ ಮಂತ್ರಿಮಂಡಲದಲ್ಲಿ ಆರ್ಥಿಕ ಸಚಿವರಾಗಿ, 2004ರಿಂದ 14ರವರೆಗೆ 10 ವರ್ಷಗಳ ಕಾಲ‌ ಪ್ರಧಾನಿಯಾಗಿ ಅವರು ಮಾಡಿದ್ದು ದೊಡ್ಡ ಕೆಲಸ. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಅವರು ಆ ಹುದ್ದೆ ತ್ಯಾಗ ಮಾಡಿ ಮನಮೋಹನ್​ ಸಿಂಗ್ ಅವರನ್ನು ಆಯ್ಕೆ ಮಾಡಿದ್ದು ಸಾರ್ಥಕತೆ ಆಗಿತ್ತು" ಎಂದರು.

"ನಾನು ಸಿಎಂ ಆಗಿದ್ದಾಗ ಸಿಂಗ್ ಅವರು ಕರ್ನಾಟಕದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆಗೆ ಬಂದಿದ್ದರು. 2013ರಿಂದ 18ರವರೆಗೆ ನಮ್ಮ ಸರ್ಕಾರವಿದ್ದಾಗ ಕರ್ನಾಟಕದ ಆರ್ಥಿಕತೆ ಬಹಳ ಸದೃಢವಾಗಿದೆ 'ರೊಬಸ್ಟ್‌ ಎಕಾನಮಿ' ಎಂಬ ಪದ ಬಳಸಿ ಶ್ಲಾಘಿಸಿದ್ದರು" ಎಂದು ಸ್ಮರಿಸಿದರು.

"ಮನಮೋಹನ್​ ಸಿಂಗ್ ಅವರ ಜ್ಞಾನ‌ದಿಂದ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತು. ನಾನು ಬದುಕಿದ್ದಾಗ ಹೆಚ್ಚು ಪ್ರಚಾರ ಮಾಡುವುದಿಲ್ಲ. ನಾನು ಸತ್ತ ಮೇಲೆ ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡುತ್ತವೆ ಎಂದಿದ್ದರು. ಅದು ಈಗ ಸತ್ಯವಾಗಿದೆ. ಅತ್ಯಂತ ವಿನಯವಂತ, ವಿನಯಶೀಲರಾಗಿದ್ದ ಅವರು, ಮೃದು ಭಾಷೆಯಿಂದ ಎಲ್ಲರ ಮನಸ್ಸು ಗೆದ್ದಿದ್ದರು" ಎಂದು ನೆನಪಿಸಿಕೊಂಡರು.

Tributes paid to Manmohan Singh at Gandhi Bharat program stage in Belagavi
ಗಾಂಧಿ ಭಾರತ ಕಾರ್ಯಕ್ರಮ ವೇದಿಕೆಯಲ್ಲಿ ದಿ. ಡಾ.ಮನಮೋಹನ್​ ಸಿಂಗ್​ ಅವರಿಗೆ ಶ್ರದ್ಧಾಂಜಲಿ (ETV Bharat)

ಡಿಸಿಎಂ‌ ಡಿ.ಕೆ.ಶಿವಕುಮಾರ್​ ಮಾತನಾಡಿ, "ಗಾಂಧಿ ಭಾರತ ವೇದಿಕೆಯಲ್ಲೇ ಮತ್ತೊಬ್ಬ ಗಾಂಧಿಗೆ ಶ್ರದ್ಧಾಂಜಲಿ ನೀಡಿದ್ದು ದುಃಖ ತಂದಿದೆ." ಕೊರಗಲೇಕೆ ಮರುಗಲೇಕೆ ಎಂಬ ಡಿವಿಜಿ ಅವರ ಕಗ್ಗ ಪ್ರಸ್ತಾಪಿಸಿ, "ಸಿಂಗ್ ಅವರ ಆದರ್ಶ ಮಾರ್ಗದಲ್ಲಿ ನಡೆಯೋಣ. ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ. ನಿನ್ನೆಯ ಕಾರ್ಯಕ್ರಮದಲ್ಲಿ ಮನಮೋಹನ್​ ಸಿಂಗ್‌ ಅವರನ್ನು ಜೂಮ್‌ ಮೀಟ್‌ ಮೂಲಕ ಪಾಲ್ಗೊಳ್ಳುವಂತೆ ಮಾಡಲು ನಿರ್ಧರಿಸಿದ್ದೆವು. ಆದರೆ, ಅವರ ಆರೋಗ್ಯ ಸರಿ ಇಲ್ಲ ಎಂದು ಗೊತ್ತಾಯಿತು. 9.50ಕ್ಕೆ ಅಧಿಕೃತವಾಗಿ ನನಗೆ ಕಾರ್ಯಕ್ರಮ ರದ್ದು ಮಾಡಲು ಮಾಹಿತಿ ಬಂತು. ಮನಮೋಹನ್​ ಸಿಂಗ್ ಅವರು ಶಾಸನಬದ್ಧ ಕಾರ್ಯಕ್ರಮ ನೀಡಿದ್ದಾರೆ. ಪುಟಾಣಿ ಮಕ್ಕಳ ಶಿಕ್ಷಣ, ಆಶಾ ಕಾರ್ಯಕರ್ತೆಯರ ಮೂಲಕ ಆರೋಗ್ಯಕ್ಕೆ, ಜಮೀನು ಕಳೆದುಕೊಳ್ಳುವವರಿಗೆ ನಗರದಲ್ಲಿ ಎರಡು ಪಟ್ಟು, ಹಳ್ಳಿಗಳಲ್ಲಿ ನಾಲ್ಕು ಪಟ್ಟು ಪರಿಹಾರ ಕೊಡುವ ನಿಯಮ ತಂದರು. ಫಾರೆಸ್ಟ್‌ ಆ್ಯಕ್ಟ್‌ ತಂದು ಅರಣ್ಯವಾಸಿಗಳ ಬದುಕಿಗೂ ಹಕ್ಕು ನೀಡಿದ್ದರು. ಅವರ ಆಹಾರ ಭದ್ರತಾ ಕಾಯ್ದೆಯೇ ಅನ್ನಭಾಗ್ಯ. ಇದು ಸಿದ್ದರಾಮಯ್ಯ ಅವರಿಗೆ ಮುನ್ನುಡಿ ಬರೆಯಿತು. ಮನಮೋಹನ ಸಿಂಗ್ ಅವರ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಚಿಂತನೆ ಮಾಡಲಾಗುವುದು" ಎಂದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, "ಜನ, ಜನಪ್ರತಿನಿಧಿಗಳು ಮನ್ನಣೆ ಕೊಡದಿರಬಹುದು. ಆದರೆ, ಜಗತ್ತಿನ ಇತಿಹಾಸದಲ್ಲಿ ಅವರ ಹೆಸರು ಅಮರ. ಬಡವರ ನಾಡಿ ಮಿಡಿತ ಅರಿತಿದ್ದರು. ಶಿಕ್ಷಣ, ಆಹಾರ, ಉದ್ಯೋಗ, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದವರು. ಅವರ ಆದರ್ಶ ಬದುಕು ಬಡವರಿಗೆ ಮಿಡಿದಿತ್ತು. ಆಲಮಟ್ಟಿ ಅಣೆಕಟ್ಟೆಯನ್ನು ಕಟ್ಟಲು ನಾನು ಹೋಗಿ ಮನಮೋಹನ್​ ಸಿಂಗ್ ಅವರ ಬಳಿ ಕೇಳಿದಾಗ ಇರಿಗೇಷನ್‌ ಬಾಂಡ್‌ ಮಂಜೂರು ಮಾಡಿ ಆಲಮಟ್ಟಿ ಡ್ಯಾಮ್ ಎರಡೇ ವರ್ಷದಲ್ಲಿ 513 ಮೀಟರ್‌ ಉದ್ದದ, ದೇಶದ ಅತ್ಯಂತ ದೊಡ್ಡ ಅಣೆಕಟ್ಟೆ ನಿರ್ಮಿಸಲು ಆಧಾರವಾಗಿದ್ದರು" ಎಂದು ಹೇಳಿದರು.

"ಮನಮೋಹನ್​ ಸಿಂಗ್ ಅವರು ಜಗತ್ತಿನ ಆರ್ಥಿಕ ಸೂರ್ಯ. ಶೇ.11 ಜಿಡಿಪಿ ಏರಿಸಿದ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ. ಅದೇ ಮಾದರಿಯಲ್ಲಿ ಸಾಗಿದ್ದರೆ ದೇಶ ನಂಬರ್‌ ಒನ್‌ ಇರುತ್ತಿತ್ತು. ಅತ್ಯಂತ ಕಡುಬಡತನದಿಂದ ಬಂದು ನಿಷ್ಕಲ್ಮಶವಾಗಿ, ನಿಷ್ಠೆಯಿಂದ ರಾಷ್ಟ್ರವನ್ನು ಮುನ್ನಡೆಸಿದರು. ಭ್ರಷ್ಟಾಚಾರ ಹೋಗಲಾಡಿಸುವ ಸಂಕಲ್ಪ ಪಡೆದು, ಲೋಕಪಾಲ್‌ ಕಾಯ್ದೆ ನಿರ್ಮಿಸಿದ್ದು ಸಂಸತ್ತಿನ ಇತಿಹಾಸದಲ್ಲಿ ದಾಖಲಾಗಿದೆ. ಅಂದು ಇಂದು ಮುಂದೆಯೂ ಅವರು ಆದರ್ಶದ ಧ್ರುವನಕ್ಷತ್ರವಾಗಿ ನಮ್ಮ ಮುಂದೆ ನಿಲ್ಲುತ್ತಾರೆ" ಎಂದು ಸ್ಮರಿಸಿದರು.

ಸಚಿವ ಎಚ್.ಕೆ.ಪಾಟೀಲ್​ ಮಾತನಾಡಿ, "ಬಡರಾಷ್ಟ್ರ ಎಂದು ಕರೆಯುತ್ತಿದ್ದ ದೇಶವನ್ನು ಪ್ರಗತಿಪರ ದೇಶ ಎಂಬ ಕೀರ್ತಿ ತಂದುಕೊಟ್ಟಿದ್ದು ಇದೇ ಮನಮೋಹನ್​ ಸಿಂಗ್ ಅವರು. ನಾಯಕಿ ಸೋನಿಯಾ ಗಾಂಧಿ ಅವರ ವಿಶ್ವಾಸವನ್ನು ಪೂರ್ಣ ಗಳಿಸಿಕೊಂಡಿದ್ದರು. ಸೋನಿಯಾ ಗಾಂಧಿ ಅವರ ತ್ಯಾಗದ ನಿಲುವು, ದೂರದೃಷ್ಟಿಯ ಕಾರಣ ಅವರು ಪ್ರಧಾನಿ ಆದರು. ಅದು ಅತ್ಯಂತ ಸಾರ್ಥಕವಾದ ದಿನ. ಸಿನಿಮಾ ನೋಡಿದ ಮೇಲೆ ಜನ ಸಿಂಗ್‌ ಈಸ್‌ ಕಿಂಗ್, ಮೌನಿ ಅಲ್ಲ ಜ್ಞಾನಿ ಎಂದು ಇಡೀ ದೇಶವೇ ಅಭಿದಾನ ನೀಡಿತ್ತು. ಜಗತ್ತು ಇಂದು ಕೂಡ ಆರ್ಥಿಕ ಸಮಸ್ಯೆಯಿಂದ ಬಚಾವಾಗಿದ್ದರೆ ಮನಮೋಹನ್​ ಅವರ ಜ್ಞಾನ ಕಾರಣ. ನಾನು ಅವರ ಪಾಠ ಕಲಿತಿದ್ದೇನೆ. ಅವರನ್ನು ಕಳೆದುಕೊಂಡ ಜಗತ್ತು ಬಡವಾಗಿದೆ" ಎಂದರು‌.

ಶ್ರದ್ಧಾಂಜಲಿ ಸಭೆಯಲ್ಲಿ ಸಚಿವರಾದ ಎಂ.ಬಿ‌.ಪಾಟೀಲ, ಸತೀಶ ಜಾರಕಿಹೊಳಿ, ಕೆ.ಜೆ.ಜಾರ್ಜ್, ಡಾ.ಎಚ್‌.ಸಿ.ಮಹಾದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಸಚಿವರು, ಶಾಸಕರು ಇದ್ದರು.

ಇದನ್ನೂ ಓದಿ: ಡಾ. ಮನಮೋಹನ್​ ಸಿಂಗ್ ನೀಲಿ ಬಣ್ಣದ ಪೇಟವನ್ನೇ ಏಕೆ ಧರಿಸುತ್ತಿದ್ದರು?; ಕಾರಣ ಬಹಿರಂಗ ಪಡಿಸಿದ್ದ 'ಬ್ಲೂ ಟರ್ಬನ್​'!

Last Updated : 15 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.