ಬೀದರ್: ಕಾಡು ಹಂದಿಗಳ ದಾಳಿಗೆ 1 ಲಕ್ಷ ಮೌಲ್ಯದ ಕಬ್ಬು ನಾಶ.. ರೈತನಿಗೆ ಸಂಕಷ್ಟ - ಕಾಡು ಹಂದಿಗಳ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/24-07-2023/640-480-19083194-thumbnail-16x9-vny.jpg)
ಬೀದರ್: ಕಬ್ಬಿನ ಗದ್ದೆಗೆ ನುಗ್ಗಿದ ಕಾಡು ಹಂದಿಗಳು ಒಂದು ಎಕರೆ ಕಬ್ಬು ನಾಶ ಮಾಡಿರುವ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಕಂದಗೂಳ ಗ್ರಾಮದಲ್ಲಿ ನಡೆದಿದೆ. ಸತತ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಬೆಳೆಗಳು ಕೂಡ ನಾಶವಾಗಿವೆ. ಇದರ ನಡುವೆಯೇ ಅಣ್ಣೆಪ್ಪ ನಾಗನಕೇರಾ ಎಂಬ ರೈತ ತನ್ನ 5 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಕಬ್ಬಿನ ಗದ್ದೆಗೆ ರಾತ್ರಿ ಸಮಯ ಕಾಡು ಹಂದಿಗಳು ದಾಳಿ ಮಾಡಿ ಒಂದು ಎಕರೆಗಿಂತ ಅಧಿಕ ಪ್ರಮಾಣದ ಬೆಳೆಯನ್ನು ನಾಶ ಮಾಡಿವೆ.
ಒಂದು ಎಕರೆ ಕಬ್ಬಿನ ಬೆಳೆ ನಾಶದಿಂದ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಸಾಲ ಮಾಡಿ ಕಬ್ಬು ಬೆಳೆಸಿದ್ದು, ಇದೀಗ ಕಾಡು ಹಂದಿ ದಾಳಿಯಿಂದ ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ. ಇದರಿಂದ ತುಂಬಾ ನೋವಾಗಿದೆ, ತಂದ ಸಾಲವನ್ನು ತೀರಿಸಲು ಏನು ಮಾಡಬೇಕು ಎಂಬ ಆತಂಕ ಕಾಡುತ್ತಿದೆ. ನನಗಾದ ನಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳೆ ಪರಿಹಾರದ ನೆರವು ನೀಡಬೇಕು ಎಂದು ರೈತ ಅಣ್ಣೆಪ್ಪ ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ತುಮಕೂರು: ರಾತ್ರಿಯಾಗುತ್ತಿದ್ದಂತೆ ಗ್ರಾಮದೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಕರಡಿ.. ಜನರಲ್ಲಿ ಆತಂಕ