Watch.. ಮಕ್ಕಳಿಗೆ 14 ವರ್ಷದವರೆಗೂ ಓದುವ ಹವ್ಯಾಸ ರೂಢಿಸಿ: ಸುಧಾಮೂರ್ತಿ ಸಲಹೆ - ಸಾಹಿತಿ ಸುಧಾಮೂರ್ತಿ
🎬 Watch Now: Feature Video
ಜೈಪುರ(ರಾಜಸ್ಥಾನ): ಕೊರೊನಾ ಬಳಿಕ ಮಕ್ಕಳಲ್ಲಿ ಗೆಜೆಟ್ಗಳ ಬಳಕೆಯಿಂದ ಪುಸ್ತಕ ಓದುವ ರೂಢಿ ಕಡಿಮೆಯಾಗಿದೆ. ಅವರನ್ನು ಗ್ಯಾಜೆಟ್ಗಳಿಂದ ದೂರವಿರಿಸಿ ಕನಿಷ್ಠ 14 ವರ್ಷದವರೆಗೆ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಬೇಕು. ತಂತ್ರಜ್ಞಾನ ಬಳಕೆಯ ಮಿತಿಯೊಂದಿಗೆ ಓದಿಗೂ ಮಹತ್ವ ನೀಡಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನಾಧ್ಯಕ್ಷೆ, ಸಾಹಿತಿ ಸುಧಾಮೂರ್ತಿ ಅವರು ಹೇಳಿದ್ದಾರೆ.
ಜೈಪುರದಲ್ಲಿ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಗಮನ ಕೇಂದ್ರೀಕರಿಸುವುದು ಕಷ್ಟವಾಗಿದೆ. ಅವರನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಆನ್ಲೈನ್ ತರಗತಿಗಳು ಕಡ್ಡಾಯವಾದ ಬಳಿಕ ಮಕ್ಕಳ ನಿಯಂತ್ರಣ ಕಷ್ಟವಾಗಿದೆ. ಗ್ಯಾಜೆಟ್ಗಳು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಿಧ್ದು, ದೀರ್ಘಾವಧಿಯಲ್ಲಿ ಅವರ ಕಣ್ಣುಗಳ ಮೇಲೆ ಅಧಿಕ ಒತ್ತಡ ಹಾಕಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪುಸ್ತಕ ನೀಡುವ ಆನಂದ ಗ್ಯಾಜೆಟ್ಗಳ ನೀಡುವುದಿಲ್ಲ. ಕನಿಷ್ಠ 10 ರಿಂದ 14 ವರ್ಷಗಳವರೆಗೆ ಅವರಿಗೆ ಓದುವ ಹವ್ಯಾಸ ರೂಢಿಸಿ. 16 ವರ್ಷಗಳ ನಂತರ ಅವರನ್ನು ಬಿಟ್ಟುಬಿಡಿ ಎಂದು ಪದ್ಮಶ್ರೀ ಪುರಸ್ಕೃತೆ ಸಲಹೆ ನೀಡಿದರು.
ಬರವಣಿಗೆಯ ಬಗ್ಗೆ ಮಾತನಾಡಿ, ಮುಂಜಾನೆ ಬರೆಯುವಾಗ ಜನರು ಮತ್ತು ಫೋನ್ ಕರೆಗಳು, ಆಹಾರ ತನ್ನನ್ನು ವಿಚಲಿತಗೊಳಿಸುತ್ತದೆ ಎಂದು ಒಪ್ಪಿಕೊಂಡ ಅವರು, ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುತ್ತೇನೆ. ನಾನು ಬರೆಯುವಾಗ ಒಬ್ಬಂಟಿಯಾಗಿರಲು ಬಯಸುತ್ತೇನೆ. ಆಲೋಚನಾ ಪ್ರಕ್ರಿಯೆ ಆ ವೇಳೆ ತೀಕ್ಷ್ಣವಾಗಿರುತ್ತದೆ. ನೀರು ಅಥವಾ ತೆಂಗಿನಹಾಲನ್ನು ಕುಡಿಯಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ಸಾಹಿತ್ಯೋತ್ಸವಗಳು ಪುಸ್ತಕಾಭಿಮಾನಿಗಳಿಗೆ ದೊಡ್ಡ ವೇದಿಕೆಗಳಾಗಿವೆ. ಇಂತಹ ಉತ್ಸವಗಳಿಂದ ಸಾಹಿತ್ಯಲೋಕ ಇನ್ನಷ್ಟು ಅಗಾಧವಾಗಲಿದೆ. ಸಾಹಿತ್ಯ ಸಂಭ್ರಮಗಳು ಇನ್ನಷ್ಟು ಹೆಚ್ಚಬೇಕು ಎಂದು ಸಲಹೆ ನೀಡಿದರು.
ಓದಿ: ಬ್ಯುಸಿ ರಸ್ತೆಯಲ್ಲಿ ಸೊಂಟ ಬಳುಕಿಸಿದ ಯುವತಿ.. ಪೊಲೀಸ್ ಇಲಾಖೆಯಿಂದ ಭಾರಿ ದಂಡ!