ಬಸ್ಸು ಸಿಕ್ಕಾಪಟ್ಟೆ ರಸ್ಸು.. ಪ್ರಾಣದ ಹಂಗು ತೊರೆದು ಬಾಗಿಲಿನಲ್ಲಿ ಜೋತು ಬಿದ್ದು ವಿದ್ಯಾರ್ಥಿಗಳ ಪ್ರಯಾಣ - ಬಸ್ಸು ಸಿಕ್ಕಾಪಟ್ಟೆ ರಸ್ಸು

🎬 Watch Now: Feature Video

thumbnail

By

Published : Jul 15, 2023, 2:24 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಓಡಾಟ ಹೆಚ್ಚಾಗಿದೆ. ಅದರಲ್ಲೂ ನಗರ ಸಾರಿಗೆ ಬಸ್​ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಕೆಲ ಬಸ್​ಗಳಲ್ಲಿ ಸೀಟ್​ ಇಲ್ಲದಿದ್ದರು​​ ಫುಟ್​ ಬೋರ್ಡ್​ ಮೇಲೆ ನಿಂತು ಪ್ರಯಾಣಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಇದೀಗ ಹುಬ್ಬಳ್ಳಿ ಧಾರವಾಡ ಅವಳಿನಗರದ ಚೆನ್ನಮ್ಮ ವೃತ್ತದ ಬಳಿಯ ನೇಕಾರನಗರದ ಬಸ್ಸಿನಲ್ಲಿ ಇಂತಹ ಪ್ರಸಂಗ ಕಂಡುಬಂದಿದೆ. ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಬಸ್ಸಿನಲ್ಲಿ ಸೀಟ್​ ಇಲ್ಲದಿದ್ದರೂ ಪ್ರಾಣದ ಹಂಗು ತೊರೆದು ಫುಟ್​ ಬೋರ್ಡ್​ ಮೇಲೆ ನಿಂತು ಪ್ರಯಾಣಿಸಿದ್ದಾರೆ. ಪ್ರಯಾಣಿಕರಿಂದ ಸೀಟ್​ಗಳೆಲ್ಲ ಭರ್ತಿಯಾಗಿದ್ದರೂ ಇದನ್ನು ಲೆಕ್ಕಿಸದೇ ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸಿದ್ದಾರೆ.

ಕೊಪ್ಪಳ್ಳ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ : ಕಳೆದ ಎರಡು ದಿನಗಳ ಹಿಂದೆ ಬಸ್ಸಿನಲ್ಲಿ ಸೀಟು​ ಇಲ್ಲದ ಕಾರಣ ವೃದ್ಧೆಯೊಬ್ಬರು ತನ್ನ ಮೊಮ್ಮಗುವಿನೊಂದಿಗೆ ಫುಟ್ ಬೋರ್ಡ್​ನಲ್ಲಿ ಕುಳಿತು ಪ್ರಯಾಣಿಸಿದ ಪ್ರಸಂಗ ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಹ ಪ್ರಯಾಣಿಕರು ಕನಿಷ್ಠ ಮಾನವೀಯತೆ ಇಲ್ಲದಂತೆ ವರ್ತಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ : ಬಸ್​ನಲ್ಲಿ ಸೀಟು ಸಿಗದೇ ಮೊಮ್ಮಗುವಿನೊಂದಿಗೆ ಪುಟ್ ಬೋರ್ಡ್​ನಲ್ಲಿ ಕುಳಿತು ಪ್ರಯಾಣಿಸಿದ ಅಜ್ಜಿ - ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.