ಕಿಲೋ ಮೀಟರ್ ದೂರದವರೆಗೆ ವಿದ್ಯಾರ್ಥಿಯನ್ನು ಎಳೆದೊಯ್ದ ಕಾರು.. ರೊಚ್ಚಿಗೆದ್ದ ಜನರಿಂದ ಚಾಲಕನಿಗೆ ಥಳಿತ - ವಿದ್ಯಾರ್ಥಿಯನ್ನು ಎಳೆದೊಯ್ದ ಕಾರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17418419-thumbnail-3x2-sefed.jpg)
ದೆಹಲಿಯ ಭಯಾನಕ ಪ್ರಕರಣದಂತಹ ಘಟನೆ ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಮುನ್ನೆಲೆಗೆ ಬಂದಿದೆ. ಕಾರೊಂದು ಸುಮಾರು ಒಂದು ಕಿಲೋಮೀಟರ್ವರೆಗೆ ವಿದ್ಯಾರ್ಥಿಯೋರ್ವನನ್ನು ಎಳೆದೊಯ್ದಿದೆ. ಇದನ್ನು ಕಂಡ ಜನರು ಕಾರು ನಿಲ್ಲಿಸುವಂತೆ ಹೇಳಿದ್ರೂ ಸಹ ಕಿವಿಗೊಡದೇ ಚಾಲಕ ಹಾಗೇ ಮುಂದಕ್ಕೆ ಸಾಗಿದ್ದಾನೆ. ಬಳಿಕ ಕಾರು ನಿಲ್ಲಿಸುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಆಗ ಡ್ರೈವರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಕಾರನ್ನು ಜಖಂಗೊಳಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬೈಕ್ನಲ್ಲಿ ಠಾಣೆಗೆ ಕರೆದೊಯ್ಯಲು ಹರಸಾಹಸ ಪಟ್ಟರು. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Feb 3, 2023, 8:38 PM IST