ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಬೀದಿನಾಯಿ ರಕ್ಷಿಸಿದ ಯುವಕ- ವಿಡಿಯೋ - stray dog fallen into a well rescued
🎬 Watch Now: Feature Video
ಚಾಮರಾಜನಗರ : ಬಾವಿಗೆ ಬಿದ್ದ ಬೀದಿನಾಯಿಯನ್ನು ಯುವಕನೋರ್ವ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ಇಂದು ನಡೆದಿದೆ. ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ನಾಯಿಯನ್ನು ಕಂಡ ನಾಗೇಂದ್ರ ಎಂಬವರು ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ಮಾನವೀಯತೆ ಮೆರೆದರು.
ಇದನ್ನೂ ಓದಿ : ಬೆಳ್ಳಂಬೆಳಗೆ ಬಾವಿಗೆ ಬಿದ್ದ ಎರಡರ ಪೈಕಿ ಒಂದು ಕರಡಿ.. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಕರಡಿ ರಕ್ಷಣೆ
ಕಳೆದ ಎರಡು ದಿನಗಳಿಂದ ಇಲ್ಲಿನ 20 ಅಡಿ ಆಳದ ತೆರೆದ ಬಾವಿಗೆ ನಾಯಿ ಬಿದ್ದಿತ್ತು. ಅಂದಿನಿಂದ ಮೇಲೆ ಬರಲಾರದೇ ಬಾವಿಯಲ್ಲೇ ಒದ್ದಾಡುತ್ತಿತ್ತು. ಬಳಿಕ ಇದನ್ನು ಕಂಡ ಗೂಳಿಪುರದ ನಾಗೇಂದ್ರ ಬಾವಿಗೆ ಇಳಿದು ನಾಯಿಯ ರಕ್ಷಣೆಗೆ ಮುಂದಾದರು. ನಂತರ ಹಗ್ಗದ ಸಹಾಯದಿಂದ ನಾಯಿಯನ್ನು ಕಷ್ಟಪಟ್ಟು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಅವರು ಯಳಂದೂರು ತಾಲೂಕು ಕಾವಲುಪಡೆಯ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ : ಬಾವಿಗೆ ಬಿದ್ದ ನಾಯಿ.. ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ: ವಿಡಿಯೋ