ವೀರಭದ್ರೇಶ್ವರ ಜಾತ್ರೆ: ಕೆಂಡಾರ್ಚನೆ ಮಾಡಿ ದೇವರಿಗೆ ಹರಕೆ ತೀರಿಸಿದ ಸಾವಿರಾರು ಭಕ್ತರು.. - etv bharat karnataka

🎬 Watch Now: Feature Video

thumbnail

By

Published : Jan 27, 2023, 8:36 PM IST

Updated : Feb 3, 2023, 8:39 PM IST

ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ಮೂರು ದಿನ ವಿವಿಧ ಕಾರ್ಯಕ್ರಮಗಳು ನಡೆದವು. ಥೇರ್ ಮೈದಾನದಲ್ಲಿ ಸಹಸ್ರಾರು ಭಕ್ತರು ಕೆಂಡಾರ್ಚನೆ ಮಾಡಿ ದೇವರಿಗೆ ಹರಕೆ ತೀರಿಸಿದರು. ವೀರಭದ್ರೇಶ್ವರ ದೇವಸ್ಥಾನದಿಂದ ಥೇರ್ ಮೈದಾನದ ಅಗ್ನಿಕುಂಡದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಗುರುವಾರ ಬೆಳಗಿನ ಜಾವ ಅಗ್ನಿಕುಂಡದಲ್ಲಿ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿತು. ಈ ವೇಳೆ, ಶಾಸಕ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ್​ ಪಾಟೀಲ್, ಕೆಎಸ್‍ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ ಮೊದಲಾದವರು ಕೆಂಡಾರ್ಚನೆ ಮಾಡಿದರು. 

ಇದನ್ನೂ ಓದಿ:ಬ್ರಿಟಿಷ್‌ ನಾಡಲ್ಲಿ ಬೀದರ ಹುಡುಗನ ಕನ್ನಡ ಪ್ರೇಮ: MS ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶನ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.