ಎಲ್ಲರೂ ಗೌರವ ಕೊಡುವುದು ನನಗಲ್ಲ, ಸ್ಪೀಕರ್ ಪೀಠಕ್ಕೆ: ವಿಧಾನಸಭಾಧ್ಯಕ್ಷ ಯು ಟಿ ಖಾದರ್
🎬 Watch Now: Feature Video
Published : Nov 18, 2023, 4:39 PM IST
ಮಂಗಳೂರು: ಮುಸ್ಲಿಂ ಸ್ಪೀಕರ್ಗೆ ಬಿಜೆಪಿ ಶಾಸಕರು ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು ಟಿ ಖಾದರ್ ಪ್ರತಿಕ್ರಿಯಿಸಿ, ನಾನು ಎಲ್ಲರ ಸ್ಪೀಕರ್. ಈ ಸ್ಥಾನವನ್ನು ರಾಜಕೀಯ ಮತ್ತು ಜಾತಿ ಧರ್ಮದ ಆಧಾರದಲ್ಲಿ ನೋಡುವಂತಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿ - ಧರ್ಮ, ರಾಜಕೀಯ ಎಲ್ಲವನ್ನೂ ಮೆಟ್ಟಿ ಮೇಲೆ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಪೀಠ ಈ ಸ್ಪೀಕರ್ ಸ್ಥಾನಕ್ಕಿದೆ. ಎಲ್ಲರೂ ಗೌರವ ಕೊಡುವುದು ನನಗಲ್ಲ, ಸಂವಿಧಾನ ಬದ್ಧವಾಗಿ ಸ್ಥಾಪಿತವಾಗಿರುವ ಸಭಾಧ್ಯಕ್ಷ ಸ್ಥಾನಕ್ಕೆ ಎಂದು ಖಾದರ್ ಹೇಳಿದ್ದಾರೆ.
ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳುವವರು ಸ್ಥಾನದ ಗೌರವ ಉಳಿಸಬೇಕು. ಜಮೀರ್ ಅವರ ಹೇಳಿಕೆಗೆ ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ. ಜಾತಿಯ ಆಧಾರದಲ್ಲಿ ನನ್ನನ್ನು ಪೀಠದಲ್ಲಿ ಕುಳಿತುಕೊಳ್ಳಲು ಆಯ್ಕೆ ಮಾಡಿಲ್ಲ. ಅರ್ಹತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ಇಟ್ಟು ಸ್ಪೀಕರ್ ಸ್ಥಾನ ನೀಡಿದ್ದಾರೆ. ಎಲ್ಲರಿಗೂ ಗೌರವ ನೀಡಿ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಆದ್ದರಿಂದ ಸ್ಪೀಕರ್ ಸ್ಥಾನವನ್ನು ಪಕ್ಷ ಮೀರಿ ನೋಡಲು ಬಯಸುತ್ತೇನೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
ಇದನ್ನೂಓದಿ:ಆರ್ ಅಶೋಕ್ ವಿಪಕ್ಷ ನಾಯಕನಾಗಿರುವುದು ನನಗೆ ಬಹಳ ಸಂತೋಷ ತಂದಿದೆ: ಡಿ ಕೆ ಶಿವಕುಮಾರ್