ಪರಶುರಾಮ್ ಹತ್ಯೆಯಲ್ಲಿ ಮಗನೊಂದಿಗೆ ಗೆಳೆಯ ಭಾಗಿ: ಎಸ್ಪಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್
🎬 Watch Now: Feature Video
ಬಾಗಲಕೋಟೆ: ಮುಧೋಳದಲ್ಲಿ ತಂದೆಯನ್ನು ಕೊಲೆಗೈದು ಮೃತದೇಹವನ್ನು ತುಂಡರಿಸಿ ಕೊಳವೆಬಾವಿಗೆ ಹಾಕಿದ ಪ್ರಕರಣದಲ್ಲಿ ಮಗ ವಿಠ್ಠಲ್ ಜೊತೆಗೆ ಇನ್ನೋರ್ವ ಸ್ನೇಹಿತ ಕೈ ಜೋಡಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಮಾಹಿತಿ ನೀಡಿದರು. 50 ಸಾವಿರ ರೂಪಾಯಿಗೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪರಶುರಾಮ್ ನಾಪತ್ತೆಯಾಗಿರುವ ಬಗ್ಗೆ ವಿಠ್ಠಲ್ನನ್ನು ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಮುಧೋಳ ಸಿಪಿಐ ಅಯ್ಯನಗೌಡ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
Last Updated : Feb 3, 2023, 8:35 PM IST