ಗಿನ್ನೆಸ್​​ ದಾಖಲೆ ಬರೆದ ಸೊಲ್ಲಾಪುರದ ಯುವಕ: ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಚೀನಾ ಪ್ರಜೆಯ ವಿಶ್ವದಾಖಲೆ ಮುರಿದ ಆದಿತ್ಯ

🎬 Watch Now: Feature Video

thumbnail

By

Published : Aug 7, 2023, 9:01 AM IST

ಮುಂಬೈ( ಮಹಾರಾಷ್ಟ್ರ): ಭಾರತ ದೇಶವು ತನ್ನ ಅಸಾಧಾರಣ ಪ್ರತಿಭೆ, ಪ್ರದರ್ಶನದೊಂದಿಗೆ ಜಗತ್ತಿನಾದ್ಯಂತ ಛಾಪು ಮೂಡಿಸುತ್ತಿದೆ. ಇದೀಗ ಸೊಲ್ಲಾಪುರದ ಆದಿತ್ಯ ಕೊಡಮೂರ್​ ಎಂಬ ಯುವಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಒಂದು ನಿಮಿಷದಲ್ಲಿ ಕಲ್ಲಂಗಡಿ ಮೇಲೆ 18 ಇಸ್ಪೀಟ್​ ಕಾರ್ಡ್‌ಗಳನ್ನು ಎಸೆಯುವ ಮೂಲಕ ವಿಶ್ವದಾಖಲೆ (ಕಾರ್ಡ್ ಥ್ರೋಯಿಂಗ್ ವರ್ಲ್ಡ್ ಚಾಂಪಿಯನ್) ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಚೀನಾದ ವ್ಯಕ್ತಿಯೊಬ್ಬರ ಹೆಸರಿನಲ್ಲಿತ್ತು.  

ಬಾಲ್ಯದಿಂದಲೂ ಜಾದೂಗಾರನಾಗುವ ಆಸಕ್ತಿ : ಇಂಡಿಯಾಸ್ ಗಾಟ್ ಟ್ಯಾಲೆಂಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಕುರಿತು ಸಂತಸ ಹಂಚಿಕೊಂಡ ಯುವಕ, "ನನಗೆ ಬಾಲ್ಯದಿಂದಲೂ ಜಾದೂವಿನ ಮೇಲೆ ಒಲವಿತ್ತು. ಮೊದಲಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರು. ಆ ನಂತರ ನನ್ನ ಆಸಕ್ತಿಯನ್ನು ಕಂಡು ಬೆಂಬಲ ನೀಡಿದರು. ಇಂಡಿಯಾಸ್​ ಗಾಟ್ ಟ್ಯಾಲೆಂಟ್​ನಲ್ಲಿ ಭಾಗವಹಿಸಲು ಮೂರು ವರ್ಷಗಳ ಕಾಲ ಅಭ್ಯಾಸ ನಡೆಸಿದೆ. ಮುಂದಿನ ದಿನಗಳಲ್ಲಿ ಅಮೆರಿಕ ಗಾಟ್ ಟ್ಯಾಲೆಂಟ್, ಏಷ್ಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ವಿಶ್ವದಾಖಲೆ ಮಾಡಲಿದ್ದೇನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.  

ಇದನ್ನೂ ಓದಿ : ಫುಟ್​ಬಾಲ್ ನಟ್​ಮೆಗ್​ನಲ್ಲಿ ಗಿನ್ನಿಸ್ ದಾಖಲೆ: ವಿದೇಶಿ ಆಟಗಾರರ ದಾಖಲೆ ಮುರಿದ ಮಂಗಳೂರು ಯುವಕ

ಕಲ್ಲಂಗಡಿ ಮೇಲೆ ಒಂದು ನಿಮಿಷದಲ್ಲಿ 17 ಕಾರ್ಡ್‌ಗಳನ್ನು ಎಸೆಯುವ ಮೂಲಕ ಚೀನಾದ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದರು. ಇದೀಗ ಒಂದು ನಿಮಿಷದಲ್ಲಿ 18 ಕಾರ್ಡ್‌ಗಳನ್ನು ಎಸೆಯುವ ಮೂಲಕ ಆ ದಾಖಲೆಯನ್ನು ಆದಿತ್ಯ ಮುರಿದಿದ್ದಾರೆ. ಆದಿತ್ಯ ವಿಶ್ವ ದಾಖಲೆಯ ಎಪಿಸೋಡ್ ಅನ್ನು​ ಜುಲೈ 6 ರಂದು ರಾತ್ರಿ ಸೋನಿ ಟಿವಿ ರಿಯಾಲಿಟಿ ಶೋ 'ಇಂಡಿಯಾಸ್ ಗಾಟ್ ಟ್ಯಾಲೆಂಟ್'​ನಲ್ಲಿ ಪ್ರದರ್ಶಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.