ತುಮಕೂರು: ದೇವರ ಕೊಠಡಿಯಲ್ಲಿ ಹೆಡೆ ಎತ್ತಿದ ನಾಗಪ್ಪ! - snake protection
🎬 Watch Now: Feature Video
Published : Oct 1, 2023, 2:25 PM IST
ತುಮಕೂರು: ಆಹಾರ ಅರಸಿ ಮನೆಯೊಂದಕ್ಕೆ ನಾಲ್ಕು ಅಡಿ ಉದ್ದದ ನಾಗರ ಹಾವು ನುಗ್ಗಿತ್ತು. ನಾಗಪ್ಪನನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದ ಘಟನೆ ಇಲ್ಲಿನ ಯಲ್ಲಾಪುರ ವಿನಾಯಕ ನಗರದಲ್ಲಿ ನಡೆದಿದೆ. ಸಿದ್ದರಾಜು ಎಂಬುವರ ಮನೆಯ ದೇವರ ಕೋಣೆಯಲ್ಲಿ ಈ ಬೃಹತ್ ಗಾತ್ರದ ನಾಗರ ಹಾವು ಕಾಣಿಸಿಕೊಂಡಿತ್ತು.
ದೇವರ ಮನೆಯಲ್ಲಿ ಪೂಜೆ ಮಾಡಲು ಬಂದ ಸಿದ್ದರಾಜು ಅವರು ಅಲ್ಲಿ ಅವಿತು ಕುಳಿತಿದ್ದ ನಾಗರ ಹಾವನ್ನು ಕಂಡಿದ್ದಾರೆ. ತಕ್ಷಣ ಸಿದ್ದರಾಜು ಭಯಭೀತರಾಗಿ ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಅವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ದಿಲೀಪ್ ಈ ನಾಗರಹಾವನ್ನು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವನ್ನು ಹಿಡಿದಿದ್ದರಿಂದ ಸಿದ್ದರಾಜು ಕುಟಂಬಸ್ಥರು ಮತ್ತು ಸುತ್ತಮುತ್ತಲಿನ ಜನರು ನಿಟ್ಟುಸಿರುವ ಬಿಟ್ಟಿದ್ದಾರೆ.
ಎಲ್ಲಿಯಾದರು ಹಾವನ್ನು ಕಂಡ ಜನರು ಭಯದಿಂದ ದೂರ ಓಡುತ್ತಾರೆ. ಅಂತಹದ್ದರಲ್ಲಿ ದೇವರ ಕೋಣೆಗೆ ಹಾವು ನುಗ್ಗಿದ್ದರಿಂದ ಸಿದ್ದರಾಜು ಮತ್ತವರ ಮನೆಯವರು ಆತಂಕಕ್ಕೀಡಾಗಿದ್ದರು. ಆದ್ರೆ ಉರಗ ತಜ್ಞ ದಿಲೀಪ್ ಅವರು ಹಾವನ್ನು ರಕ್ಷಣೆ ಮಾಡಿ ಜನರ ಭಯವನ್ನು ದೂರ ಮಾಡಿದರು.
ಇದನ್ನೂ ಓದಿ: ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ - ಸ್ಯಾಂಡಲ್ವುಡ್ ಸ್ಟಾರ್ ಪೊಲೀಸ್ ವಶಕ್ಕೆ